ಉಜಿರೆ: ಎರಡು ದಶಕಗಳಿಂದ ಕೃಷಿಕರ ಸೇವೆಯಲ್ಲಿರುವ ಕಿರಣ್ ಆಗ್ರೋಟೆಕ್, ಉಜಿರೆ ಸ್ಥಳಾಂತರಿತ ನೂತನ ಮಳಿಗೆ ಹಾಗೂ ಸೇವಾ ಕೇಂದ್ರವು ಚಾರ್ಮಾಡಿ ರಸ್ತೆಯ ಉಜಿರೆ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡದಲ್ಲಿ ಜೂ. 12 ರಂದು ಉದ್ಘಾಟನೆಗೊಂಡಿತು.
ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು ಶರತ್ ಕೃಷ್ಣ ಪಡ್ವೆಟ್ನಾಯರು ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು.
ಈ ಸಂದರ್ಭದಲ್ಲಿ ಉಜಿರೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್, ಕಾರಂತ ಹೊಟೇಲ್ ಮಾಲಕ ಅರವಿಂದ ಕಾರಂತ, ಡಾ| ಗೋಪಾಲಕೃಷ್ಣ ಉಡುಪಿ, ನಿವೃತ್ತ ಪ್ರೋ| ಗಣಪಯ್ಯ, ಪ್ರಗತಿಪರ ಕೃಷಿಕ ರಾಜಗೋಪಾಲ್ ಪೋಲ್ನಾಯ, ಅರುಣ್ ರೆಬೆಲ್ಲೊ ಕನ್ಯಾಡಿ, ಅಗ್ರಿಮ್ಯಾಟ್ ಸೇಲ್ಸ್ ನ ನಾರಾಯಣ ಸ್ವಾಮಿ, ಸ್ಟಿವನ್, ಸ್ಟೇಟ್ ಬ್ಯಾಂಕ್ ಇಂಡಿಯಾದ ಸೋಮಯಾಗಿ ಭಾಗವಹಿಸಿ, ಶುಭಹಾರೈಸಿದರು.
ಬಂದಂತಹ ಅತಿಥಿ ಗಣ್ಯರನ್ನು ಶ್ರೀಮತಿ ಸಂಗೀತಾ ಮತ್ತು ಪ್ರಕಾಶ್ ಬಿ.ಕೆ ರವರ ಸ್ವಾಗತಿಸಿ, ಸತ್ಕರಿಸಿದರು. ಡಾ ದಿನೇಶ್ ಸರಳಾಯ ಕಾರ್ಯಕ್ರಮ ನಿರೂಪಿಸಿದರು. ಅಗ್ರೋಟೆಕ್ ಸಿಬ್ಬಂದಿಗಳು ಸಹಕರಿಸಿದರು.