ಬೆಳಾಲಿನಲ್ಲಿ ಯಾಂತ್ರಿಕೃತವಾಗಿ ಭತ್ತದ ಬೇಸಾಯ “ಯಂತ್ರಶ್ರೀ” ತರಬೇತಿ

Suddi Udaya

ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಉಜಿರೆ ವಲಯದ ಬೆಳಾಲಿನಲ್ಲಿ ಯಂತ್ರಶ್ರೀ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ತಾಲೂಕಿನ ಕೃಷಿ ಅಧಿಕಾರಿಯಾದ ರಾಮ್ ಕುಮಾರ್ ಮಾರ್ನಾಡ್ ರವರು ಭತ್ತದ ಬೀಜದ ಆಯ್ಕೆ, ಬಿಜೋಪಚಾರ, ಸಸಿ ಮಡಿಗೆ ಮಣ್ಣಿನ ಆಯ್ಕೆ ,ಸಸಿ ಮಡಿ ತಯಾರಿ, ನಾಟಿ ಗದ್ದೆಯ ತಯಾರಿ, ಯಂತ್ರದ ಮೂಲಕ ಭತ್ತದ ಸಸಿಯ ನಾಟಿ,ಖರ್ಚು ಮತ್ತು ಆದಾಯದ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಸೂರಪ್ಪ ಗೌಡ ವಚ್ಚರವರು ವಹಿಸಿಕೊಂಡರು.
ಪ್ರಗತಿಪರ ಕೃಷಿಕರಾದ ಸುರೇಶ್ ಮೂರ್ಲೆಗುಂಡಿ ಇವರು ಯಂತ್ರದ ಮೂಲಕ ಭತ್ತನಾಟಿಯ ಅನುಭವವನ್ನು ಹಂಚಿಕೊಂಡರು.
ಪ್ರಗತಿಪರ ಕೃಷಿಕರಾದ ಲೋಕಯ್ಯ ಗೌಡ ಉಪಸ್ಥಿತರಿದ್ದರು.

ಸೇವಾ-ಪ್ರತಿನಿಧಿಯಾದ ಆಶಾ ರವರು ಸ್ವಾಗತಿಸಿ ವಂದಿಸಿದರು.

Leave a Comment

error: Content is protected !!