April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿ:ನಿಸ್ವಾರ್ಥ ಸೇವೆಗೆ ಸ್ಪೂರ್ತಿಯ ಸೆಲೆಯಾದ ರವಿಕಟಪಾಡಿ: ಕಿರ್ತನ್ ಅವರ ವೈದ್ಯಕೀಯ ಚಿಕಿತ್ಸೆಗೆ ರೂ.10 ಸಾವಿರ ಹಸ್ತಾಂತರ

ಅಳದಂಗಡಿ :ಶ್ರೀ ಸತ್ಯದೇವತೆ ದೈವಸ್ಥಾನದಲ್ಲಿ ನಡೆದ ಪುಸ್ತಕ ವಿತರಣೆಯ ಸಮಾರೋಪ ಸಮಾರಂಭದಲ್ಲಿ ಸಮಾಜ ಸೇವಕ ರವಿ ಕಟಪಾಡಿ ಯವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ್ ಅಜಿಲರು ರವಿ ಕಟಪಾಡಿಯವರ ಸಮಾಜಮುಖಿ ಕೆಲಸ ಕಾರ್ಯಕ್ಕೆ ದೈವಸ್ಥಾನದ ವತಿಯಿಂದ ರೂ 10 ಸಾವಿರ ನೀಡಿ ಅಶಕ್ತರಿಗೆ ನೀವು ವಿನಿಯೋಗಿಸಿ, ಇದೊಂದು ನಮ್ಮ ಪುಟ್ಟ ಅಳಿಲು ಸೇವೆ ಎಂದರು. ಇದನ್ನು ಸ್ವೀಕರಿಸಿದ ರವಿಕಟಪಾಡಿಯವರು ಕೆಲವೇ ಕೆಲವು ಹೊತ್ತಿನಲ್ಲಿ ವೇದಿಕೆಯಿಂದ ಕೆಳಗಿಳಿಯುತ್ತಲೆ ಅಳದಂಗಡಿ ಪರಿಸರದ ಯುವಕ ಅನಾರೊಗ್ಯದಿಂದ ಬಳಲುತ್ತಿರುವ ಕೀರ್ತನ್ ಇವರಿಗೆ ಆ ಮೊತ್ತವನ್ನು ಹಸ್ತಾಂತರಿಸಿ ಮಾನವೀಯತೆ ಮೆರೆದರು. ನಿಜವಾಗಿಯು ರವಿಕಟಪಾಡಿಯವರು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಒಂದಷ್ಟು ಕ್ಷಣ ಯೋಚಿಸದೆ ಆ ಕ್ಷಣವೆ ಮಿಡಿದ ಮನಸ್ಸಿಗೆ ನಾವುಗಳು ಮೂಕವಿಸ್ಮಿತರಾದೆವು. ರವಿ ಕಟಪಾಡಿಯವರಿಗೆ ಅಳದಂಗಡಿಯ ಶ್ರೀ ಸತ್ಯದೇವತೆ ಹಾಗೂ ಶ್ರೀ ಸೋಮನಾಥೇಶ್ವರಿ ಅಮ್ಮನವರ ಶ್ರೀ ರಕ್ಷೆ ಸದಾ ಕಾಲ ಇರಲೆಂದು ಅಳದಂಗಡಿಯ ಯುವಕರು ಆಶಿಸಿದರು.

Related posts

ಕೀ ರಂದ್ರ ಶಸ್ತ್ರ ಚಿಕಿತ್ಸೆ ಯಶಸ್ವಿ

Suddi Udaya

ಮುಂಡಾಜೆ: ನಿವೃತ್ತ ಅಧ್ಯಾಪಕ ಮೋಹನ್ ತಾಮನ್ಕರ್ ನಿಧನ

Suddi Udaya

ಲಾಯಿಲ : ಕಂಪ್ಯೂಟರ್ ತರಬೇತಿಯ ಪ್ರಮಾಣ ಪತ್ರ ವಿತರಣೆ

Suddi Udaya

ಧರ್ಮಸ್ಥಳ ಮೇಳದ ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಹೃದಯಾಘಾತದಿಂದ ನಿಧನ

Suddi Udaya

ಓಡಿಲ್ನಾಳ ಸ.ಉ.ಪ್ರಾ. ಶಾಲಾ ವಿದ್ಯಾರ್ಥಿ ಮಂತ್ರಿಮಂಡಲ ರಚನೆ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಪೋಷಕರ ಸಭೆ

Suddi Udaya
error: Content is protected !!