32.2 C
ಪುತ್ತೂರು, ಬೆಳ್ತಂಗಡಿ
April 3, 2025
Uncategorizedಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ರಾಷ್ಟ್ರೀಯ ಹೆದ್ದಾರಿಯ  ಚರಂಡಿ ದುರಸ್ತಿ           

ಉಜಿರೆ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಕಲ್ಮಂಜ ಗ್ರಾಮದ ನಿಡಿಗಲ್ ಪರಿಸರದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ರಸ್ತೆ ಬದಿಯ ಚರಂಡಿಗಳನ್ನು ಸ್ವಚ್ಛಗೊಳಿಸಲಾಯಿತು. ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಯ ಮೋರಿಗಳಲ್ಲಿ ತುಂಬಿದ್ದ ತ್ಯಾಜ್ಯವನ್ನು ತೆರವುಗೊಳಿಸಿ, ಅಗತ್ಯ ಸ್ಥಳಗಳಲ್ಲಿ ಚರಂಡಿ ನಿರ್ಮಿಸಿ ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಲಾಯಿತು.
ಇಲ್ಲಿನ ಕೆಲವು ಪ್ರದೇಶಗಳಲ್ಲಿ ರಸ್ತೆ ಚರಂಡಿಯ ಮೋರಿಗಳು ಕಸಕಡ್ಡಿ, ತ್ಯಾಜ್ಯಗಳಿಂದ ಬ್ಲಾಕ್ ಆಗಿ ಮಳೆ ನೀರು ರಸ್ತೆಯುದ್ದಕ್ಕೂ ಹರಿಯುತ್ತಿತ್ತು. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಇಂತಹ ಪ್ರಾಥಮಿಕ ಕೆಲಸಗಳನ್ನು ನಡೆಸಿದರೆ ರಸ್ತೆಯಲ್ಲಿ ಮಳೆ ನೀರು ಹರಿದು ವಾಹನ ಸಂಚಾರಕ್ಕೆ ಆತಂಕಕಾರಿಯಾಗುವ  ಸಂಭವ ಕಡಿಮೆಯಾಗಬಹುದು.

Related posts

ಪರಸ್ಪರ ಯುವಕ ಮಂಡಲ ಈದು-ನಾರಾವಿ ಇದರ ನೇತೃತ್ವದಲ್ಲಿ “ಮಹಾ ಚಂಡಿಕಾಯಾಗ”ದ ವೈಭವದ ಹಸಿರುವಾಣಿ ಹೊರೆಕಾಣಿಕೆ

Suddi Udaya

ನೆರಿಯ: ಸಂಜೀವ ಗೌಡ ನಿಧನ

Suddi Udaya

ಇಂದಿನಿಂದ ಧರ್ಮಸ್ಥಳ- ಪಾಂಗಳ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಾರಂಭ

Suddi Udaya

ಭಟ್ಕಳ ಕರಿಕಲ್ ಶಾಖಾ ಮಠದಲ್ಲಿ ಜು.21 ರಿಂದ ಚಾತುರ್ಮಾಸ್ಯ ಆರಂಭ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ರಕ್ಷಿತ್ ಶಿವರಾಮ್ ಭೇಟಿ, ಪ್ರಾರ್ಥನೆ

Suddi Udaya

ಗುತ್ತಿಗೆದಾರ ನಾಪತ್ತೆಯಾಗಿದ್ದಾರೆ: ರಸ್ತೆ ಬದಿ ಬ್ಯಾನರ್ ಹಾಕಿ ಸಾರ್ವಜನಿಕರ ಆಕ್ರೋಶ

Suddi Udaya
error: Content is protected !!