25.4 C
ಪುತ್ತೂರು, ಬೆಳ್ತಂಗಡಿ
May 18, 2025
Uncategorizedಚಿತ್ರ ವರದಿತಾಲೂಕು ಸುದ್ದಿಶಿಕ್ಷಣ ಸಂಸ್ಥೆ

ಉಜಿರೆ: ಶ್ರೀ ಧ. ಮಂ. ಆಂ. ಮಾ. ಶಾಲೆಯಲ್ಲಿ ಯೋಗ ಉದ್ಘಾಟನಾ ಕಾರ್ಯಕ್ರಮ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಇಂದು ಯೋಗ ಉದ್ಘಾಟನಾ ಕಾರ್ಯಕ್ರಮನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ಶಿವಪ್ರಸಾದ್ ಶೆಟ್ಟಿ ಅವರು ದೀಪ ಬೆಳಗಿಸುವುದರ ಮೂಲಕ ನಡೆಸಿಕೊಟ್ಟು ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಯಪಡಿಸಿದರು.

ಯೋಗ ಮಾಡಿ ಸುಯೋಗಿಗಳಾಗಬಹುದು. ಯೋಗವು ಮಾನವನ ದೇಹದ ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಸ್ಥಿತಿಯನ್ನು ಉನ್ನತ ಹಂತಕೆ ಕೊಂಡೊಯ್ಯುತ್ತದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ವಿದ್ಯಾಲಕ್ಷ್ಮಿ, ಯೋಗ ತರಬೇತುಗಾರರಾದ ಮಾನ್ಯ ಆತ್ಮಿಕ ಮತ್ತು ಸಚಿ ಹಾಗೂ ಶಾಲಾ ಯೋಗ ತರಬೇತಿ ವಿದ್ಯಾರ್ಥಿಗಳೆಲ್ಲಾ ಭಾಗವಹಿಸಿದ್ದರು.

10ನೇ ತರಗತಿಯ ವಿದ್ಯಾರ್ಥಿನಿಯಾದ ಶರದಿ ಸ್ವಾಗತಿಸಿ, ಪೂಜಾ ವಂದನಾರ್ಪಣೆಯನ್ನು ಮಾಡಿದರು.

ಈ ಕಾರ್ಯಕ್ರಮದ ಸಂಯೋಜನೆಯನ್ನು ಶಾಲಾ ದೈಹಿಕಶಿಕ್ಷಕರಾದ ಸುಭಾಷ್ ಮಾಡಿದರು.

Related posts

ಪಾರೆಂಕಿ: ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ: ರಸ್ತೆ ಸಂಚಾರ ಅಸ್ತವ್ಯಸ್ತ: ಸ್ಥಳೀಯರಿಂದ ತೆರವು ಕಾರ್ಯ

Suddi Udaya

ಚೆನ್ನೆಮಣೆ ಗೊಬ್ಬು ಪಂಥೊ ಮತ್ತು ಸಂಧಿ ಪಾರ್ದನ ಸುಗಿಪ್ಪು ಪಂಥೊದ ಸಮಾರೋಪ ಸಮಾರಂಭ

Suddi Udaya

ಡಿ.ಕೆ.ಆರ್. ಡಿ.ಎಸ್ ಬೆಳ್ತಂಗಡಿ ನೇತೃತ್ವದಲ್ಲಿ ಕ್ಯಾನ್ಸರ್ ಜನಜಾಗೃತಿ ಕಾರ್ಯಕ್ರಮ ಹಾಗೂ ಧನ ಸಹಾಯ ಸಂಗ್ರಹಣಾ ಅಭಿಯಾನ

Suddi Udaya

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ‌ ಸಂಘದಿಂದ ಜಾಗತಿಕ ಔಷಧ ತಜ್ಞರ ದಿನಾಚರಣೆ

Suddi Udaya

ಭಾರತೀಯ ಭೂಸೇನೆಯಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಧರ್ಮಸ್ಥಳದ ಅನೀಶ್ ಡಿ.ಎಲ್: ಜೂನ್ 3 ರಂದು ಬೆಳ್ತಂಗಡಿಯಲ್ಲಿ ಅದ್ದೂರಿಯ ಭವ್ಯ ಸ್ವಾಗತ

Suddi Udaya

ನ.28: ಬೆಳ್ತಂಗಡಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!