37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಕುತ್ಲೂರು ಸರಕಾರಿ ಉನ್ನತೀಕರಿಸಿದ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

ಕುತ್ಲೂರು ಸರಕಾರಿ ಉನ್ನತೀಕರಿಸಿದ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭವು ನಡೆಯಿತು.

ಮುರಳಿ ಬಿ ನೋಟರಿ ವಕೀಲರು ಬೆಳ್ತಂಗಡಿ ಇವರು ಬರೆಯುವ ಪುಸ್ತಕ ವಿತರಣೆ ಮಾಡಿ ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿರುತ್ತಾರೆ. ನಮ್ಮ ಈ ಶಾಲೆಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ದೇಶದ ಉತ್ತಮ ಪ್ರಜೆಗಳಾಗಬೇಕೆಂದು ಶುಭ ಹಾರೈಸಿದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ಕುಕ್ಕುಜೆ ಪುಸ್ತಕ ವಿತರಣೆ ಮಾಡಿದ ವಕೀಲರನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಕೂತ್ಲೂರು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸತೀಶ್ ಪಡಿವಾಳ್, ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಜ್ಯೋತಿ ಶಿವಣ್ಣ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್, ಮತ್ತು ಪ್ರೇಮ, ವಕೀಲರ ಧರ್ಮಪತ್ನಿ ಮನೋರಮ ಭಟ್, ಮಕ್ಕಳಾದ ಮಯೂರ ಮತ್ತು ಮಂದಾರ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಮನಾಜಿ ಯವರು ಸ್ವಾಗತಿಸಿದರು, ಶ್ರೀಮತಿ ಶಿಲ್ಪಾರವರು ಧನ್ಯವಾದವಿತ್ತರು. ಶಾಲಾ ಮಕ್ಕಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related posts

ಯುಗಳ ಮುನಿಶ್ರೀಗಳ ದೀಕ್ಷಾ ಮಹೋತ್ಸವದ ರಜತ ಸಂಭ್ರಮ ಬೆಳಿಗ್ಗೆ ಭಗವಾನ್ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕ

Suddi Udaya

ಇಂದಬೆಟ್ಟು ಎಂಜೆಎಂ ಮಸೀದಿಯಲ್ಲಿ ಈದ್ ಆಚರಣೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗಣಪತಿ ಗುಡಿಯ ಸಮರ್ಪಣಾ ಕಾರ್ಯಕ್ರಮ

Suddi Udaya

ಇಂದಬೆಟ್ಟು ಗ್ರಾ.ಪಂ. ಗ್ರಾಮಸಭೆ

Suddi Udaya

ಮಚ್ಚಿನ: ರಸ್ತೆಯಲ್ಲಿ ಹರಿದ ಮಳೆ ನೀರು; ಗ್ರಾ.ಪಂ.ನಿಂದ ಚರಂಡಿ ದುರಸ್ತಿ: ಸುದ್ದಿ ಉದಯ ಜನಧ್ವನಿ ಇಫೇಕ್ಟ್ .

Suddi Udaya

ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಶುಲ್ಕ ಪಾವತಿಸದೆ ಇದ್ದಲ್ಲಿ ನೀರಿನ ಜೋಡಣೆ ಕಟ್

Suddi Udaya
error: Content is protected !!