25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೀಟ್ ಪರೀಕ್ಷೆಯಲ್ಲಿ ಎಕ್ಸೆಲ್ ನ ವಿದ್ಯಾರ್ಥಿಗೆ 692 ಅಂಕ

ಗುರುವಾಯನಕೆರೆ : ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆದಿತ್ ಜೈನ್ ಒಟ್ಟು 720 ಅಂಕಗಳಲ್ಲಿ 692 ಅಂಕ ಗಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿಜ್ಞಾನ ಶಿಕ್ಷಣ ಹಾಗೂ ಯೋಗ್ಯ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸಂಸ್ಥೆಗಳಿಗೆ ಸೇರುವ ಕನಸಿಗೆ ಆಸರೆ ನೀಡಿದ ಎಕ್ಸೆಲ್ ರಾಜ್ಯದಲ್ಲೇ ಮಹೋನ್ನತ ಸಾಧನೆ ಮಾಡಿದೆ. ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆದಿತ್ ಜೈನ್ ನ ಈ ಅಪೂರ್ವ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಎಕ್ಸೆಲ್ ನ ಹಲವು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಾರ್ಕ್ ಗಳು ಬಂದಿದ್ದು.. ಬಹುತೇಕ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ. ಈ ಎಲ್ಲಾ ಪ್ರತಿಭಾವಂತರನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ , ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Related posts

ಧರ್ಮಸ್ಥಳ ಸಹಕಾರ ಸಂಘದಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ

Suddi Udaya

ವಿಶ್ವ ಹಿಂದೂ ಪರಿಷದ್ ಬಜರಂಗದಳ‌ ಗ್ರಾಮ‌ ಸಮಿತಿ ನೆರಿಯ ವತಿಯಿಂದ ಗೋಪೂಜೆ

Suddi Udaya

ಕಿಲ್ಲೂರು ಎನ್ನೆಸ್ಸೆಸ್ ಶಿಬಿರದ ಸ್ಥಳೀಯ ಸಮಿತಿ ರಚನೆ

Suddi Udaya

ನೀಟ್ ಫಲಿತಾಂಶ ಪ್ರಕಟ: ರಾಷ್ಟ್ರಮಟ್ಟದಲ್ಲಿ ಕ್ರಿಯೇಟಿವ್ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

Suddi Udaya

ಬಂದಾರು : ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಉಗ್ರಾಣ ಹಾಗೂ ಕಾರ್ಯಾಲಯ ಉದ್ಘಾಟನೆ

Suddi Udaya

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: 23.47 ಲಕ್ಷ ನಿವ್ವಳ ಲಾಭ, ಶೇ.9 ಡಿವಿಡೆಂಟ್ ಘೋಷಣೆ

Suddi Udaya
error: Content is protected !!