ಉಜಿರೆ:ಕನ್ಯಾಡಿಯ ಸೇವಾಭಾರತಿ ಕನ್ಯಾಡಿ ವತಿಯಿಂದ ಸಿದ್ದವನ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಛತ್ರಿ, ಪುಸ್ತಕ, ಮತ್ತಿತರ ಲೇಖನ ಸಾಮಗ್ರಿಗಳನ್ನು ಜೂ.13ರಂದು ವಿತರಿಸಲಾಯಿತು.
ಸೇವಾಭಾರತಿಯ ಅಧ್ಯಕ್ಷೆ ಸ್ವರ್ಣಗೌರಿ ಸರಕಾರಿ ಶಾಲಾ ವಾತಾವರಣದ ಕಲಿಕೆಯಿಂದ ಮಕ್ಕಳಿಗೆ ದೊರೆಯುವ ಪ್ರಯೋಜನದ ಬಗ್ಗೆ ತಿಳಿಸಿ, ಸ್ಕೂಲ್ ಕಿಟ್ ವಿತರಿಸಿದರು. ಉಜಿರೆ ವಿಭಾಗದ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರತಿಮಾ ಕೆ ಎಂ.ಸರಕಾರಿ ಶಾಲೆಯ ಪ್ರಾಮುಖ್ಯತೆಯನ್ನು ತಿಳಿಸಿದರು. ಸಿದ್ದವನ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಜಾತಾ ರೈ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ್, ಸೇವಾಭಾರತಿ ಸಂಸ್ಥೆಯ ಸ್ವಯಂ ಸೇವಕ ಚಂದನ್ ಗುಡಿಗಾರ್, ಸೀನಿಯರ್ ಮ್ಯಾನೇಜರ್ ಚರಣ್ ಕುಮಾರ್ ಎಂ,
ಡಾಕ್ಯುಮೆಂಟೇಷನ್ ಸಂಯೋಜಕಿ ಅಪೂರ್ವಾ ಪಿ. ವಿ ಮತ್ತು ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತಾ ರೈ ನಿರೂಪಿಸಿ, ಸಹಶಿಕ್ಷಕಿ ಅಪರ್ಣಾ ವಂದಿಸಿದರು.