ನವೀಕೃತ ಯೂನಿಯನ್ ಬ್ಯಾಂಕ್ ಉಜಿರೆ ಶಾಖೆಯ ಉದ್ಘಾಟನೆ

Suddi Udaya

ಉಜಿರೆ:  ಗ್ರಾಹಕರ ಸಂತೃಪ್ತಿಯೇ ಬ್ಯಾಂಕಿನ ಯಶಸ್ಸಿಗೆ ಕಾರಣ. ಸಿಬಂದಿಗಳ ನಗುಮುಖದ ಸೇವೆಯಿಂದ ಯಾವುದೇ ಸಂಸ್ಥೆಯ  ಬೆಳವಣಿಗೆಯಾಗುವುದು.ಹಿಂದಿನ  ಕಾರ್ಪೋರೇಶನ್ ಬ್ಯಾಂಕ್ ಮತ್ತು ಈಗಿನ  ಯೂನಿಯನ್ ಬ್ಯಾಂಕ್ ಒಫ್ ಇಂಡಿಯಾದ ಸೇವಾ ವ್ಯವಹಾರದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ನವೀಕೃತ ಉಜಿರೆ ಶಾಖೆ ಗ್ರಾಹಕ ಉದ್ಯಮಿಗಳ  ಸಹಕಾರದಿಂದ ರೂ 200 ಕೋಟಿ  ಠೇವಣಿಯ ಗುರಿ  ತಲುಪಲಿ ಎಂದು ಯೂನಿಯನ್ ಬ್ಯಾಂಕ್ ಒಫ್ ಇಂಡಿಯಾದ ಮಂಗಳೂರು ವಲಯ ಮುಖ್ಯಸ್ಥೆ ಶ್ರೀಮತಿ ರೇಣು ಕೆ.ನಾಯರ್ ನುಡಿದರು.                                       

ಅವರು ಜೂ 14 ರಂದು ಉಜಿರೆ ಮಾವಂತೂರು ಸಂಕೀರ್ಣದಲ್ಲಿ ಯೂನಿಯನ್ ಬ್ಯಾಂಕ್ ಒಫ್  ಇಂಡಿಯಾದ ನವೀಕೃತ ಶಾಖೆ ಹಾಗು  ಎ ಟಿ ಎಂ  ಕೇಂದ್ರವನ್ನು ಉದ್ಘಾಟಿಸಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾರಂಭದ ಮುಖ್ಯ ಅತಿಥಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು  ಉಜಿರೆಯ ನಾಗರಿಕರು ಕಾರ್ಪೋರೇಶನ್ ಬ್ಯಾಂಕ್ ನೊಂದಿಗಿದ್ದ ಭಾವನಾತ್ಮಕ ಸಂಬಂಧವನ್ನು ಯೂನಿಯನ್ ಬ್ಯಾಂಕ್ ನೊಂದಿಗೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಶಾಖೆಯನ್ನು  ಉನ್ನತೀಕರಿಸಿ ನವೀಕರಿಸಿದ  ಸವಲತ್ತು ,ಸೇವಾ ಸೌಲಭ್ಯಗಳನ್ನು  ಗ್ರಾಹಕರು ಪಡೆದು  ಆರ್ಥಿಕವಾಗಿ ಸದೃಢರಾಗಲಿ ಎಂದು ಆಶಿಸಿ ಶುಭ ಕೋರಿದರು.                                   

ಮುಖ್ಯ ಅತಿಥಿಗಳಾಗಿ ಉಜಿರೆ ಲಕ್ಷ್ಮೀ ಗ್ರೂಪ್ ಮಾಲಕ ಮೋಹನಕುಮಾರ್ ,ಉಜಿರೆ ಎಸ್ .ಡಿ.ಎಂ.ಕಾಲೇಜು ಪ್ರಾಂಶುಪಾಲ ಡಾ!ಬಿ. ಎ .ಕುಮಾರ ಹೆಗ್ಡೆ ಮತ್ತು ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ  ಶುಭಾಶಂಸನೆಗೈದರು. ಇದೆ ಸಂದರ್ಭದಲ್ಲಿ  ಶಾಖೆಯ ಹಿರಿಯ ಗ್ರಾಹಕರಾದ ಮೋಹನಕುಮಾರ್ ,ಸೂರಜ್ ಅಡೂರ್ ಮತ್ತು ಜೋಸೆಫ್ ಕೆ.ಸಿ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.                                                         

ಯೂನಿಯನ್ ಬ್ಯಾಂಕಿನ ಪ್ರದೇಶಕ ಕಚೇರಿಯ  ಮುಖ್ಯಸ್ಥ ಮಹೇಶ್ ಜೆ. ಸ್ವಾಗತಿಸಿ, ಪ್ರಸ್ತಾವಿಸಿ, ಯೂನಿಯನ್ ಬ್ಯಾಂಕ್ ರಾಷ್ಟ್ರದ 5ನೇ ಅತಿ ದೊಡ್ಡ ಬ್ಯಾಂಕ್,ಜಿಲ್ಲೆಯಲ್ಲಿ 3ನೇ ಸ್ಥಾನ ಪಡೆದು  ಗ್ರಾಹಕ ಸ್ನೇಹಿಯಾಗಿ ತಳಮಟ್ಟದ ಉದ್ಯಮದಾರರಿಗೆ ಆರ್ಥಿಕ ನೆರವು ನೀಡಿ ಮೇಲೆ ಬರಲು ಅವಕಾಶ ನೀಡುತ್ತಿದೆ. ಗ್ರಾಮಾಂತರ ಪ್ರದೇಶದ ಜನರ  ಬಗೆಗೆ ವಿಶೇಷ ಕಾಳಜಿ ಹೊಂದಿ  ಅವರ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡುವುದು ಎಂದು ನುಡಿದು ಉಜಿರೆ ಶಾಖೆಗೆ ಎಲ್ಲರ ಸಹಕಾರ ಕೋರಿದರು. ಉಜಿರೆ ಶಾಖೆಯ ಸಿಬಂದಿ ಸಚಿನ್  ನಿರೂಪಿಸಿದ ಕಾರ್ಯಕ್ರಮದಲ್ಲಿ ,ಉಜಿರೆ ಶಾಖಾಧಿಕಾರಿ ನಿತಿನ್ ಯು ವಂದಿಸಿದರು.

Leave a Comment

error: Content is protected !!