ಪೆರಾಲ್ದರಕಟ್ಟೆ ಬದ್ರೀಯಾ ಜುಮಾ ಮಸೀದಿ ನೂತನ ಜಮಾತ್ ಕಮಿಟಿ ರಚನೆ: ನವಾಝ್ ಶರೀಫ್ ಕಟ್ಟೆ 3 ನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆ

Suddi Udaya

ತೆಂಕಕಾರಂದೂರು: ಬದ್ರೀಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ ಇದರ ಮಹಾಸಭೆಯು ಜೂ. 16 ರಂದು ಬದ್ರೀಯಾ ಶಾದಿಮಹಲ್‌ನಲ್ಲಿ ಗೌರವ ಅಧ್ಯಕ್ಷ ಹಾಜಿ ಶೇಕಬ್ಬ ದರ್ಖಾಸ್ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಕಳೆದ ಆಡಳಿತಾವಧಿಯ ಅಭಿವೃದ್ಧಿ ಕಾರ್ಯ ಮತ್ತು ಲೆಕ್ಕಪತ್ರಗಳನ್ನು ಕಾರ್ಯದರ್ಶಿ ಸಾಧಿಕ್ ಕಟ್ಟೆ ಮಂಡಿಸಿದರು.

ಸಭೆಯಲ್ಲಿ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ನವಾಝ್ ಶರೀಫ್ ಕಟ್ಟೆ ಮೂರನೇ ಬಾರಿಗೆ ಪುನರಾಯ್ಕೆಯಾದರು. ಗೌರವ ಅಧ್ಯಕ್ಷ‌ರಾಗಿ ಹಾಜಿ ಶೇಕಬ್ಬ ದರ್ಖಾಸ್, ಪ್ರಧಾನ ಕಾರ್ಯದರ್ಶಿಯಾಗಿ ಸಾಧಿಕ್ ಎಂ, ಕೋಶಾಧಿಕಾರಿಯಾಗಿ ಅಶ್ರಫ್ ಗುಂಡೇರಿ, ಉಪಾಧ್ಯಕ್ಷರಾಗಿ ಬಶೀರ್ ವೇಣೂರು ಮತ್ತು ಇಬ್ರಾಹಿಂ ( ತಮುನಾಕ) , ಕಾರ್ಯದರ್ಶಿಯಾಗಿ ಪಿ.ಕೆ.ಶರೀಫ್ ಮತ್ತು ಅಶ್ರಫ್ ಬಾವಿ ಬಳಿ, ಲೆಕ್ಕಪರಿಶೋಧಕರಾಗಿ ಸಿದ್ದೀಕ್ ಮಸೀದಿ ಬಳಿ, ವ್ಯವಸ್ಥಾಪಕರಾಗಿ ರಫೀಕ್ ಜಿ.ಎ , ಗೌರವ ಸಲಹೆಗಾರರಾಗಿ ಶಂಶುದ್ದೀನ್ ಕಟ್ಟೆ ಮತ್ತು ಕಮರುದ್ದೀನ್ ಕಳಿಕ, ಕಾನೂನು ಸಲಹೆಗಾರರಾಗಿ ಶಮೀಮ್ ಯು ಯೂಸುಫ್ ಆಯ್ಕೆಯಾದರು.

ಪ್ರಸ್ತುತ ಸಾಲಿನ ಆಡಳಿತ ಸಮಿತಿಯ ಸದಸ್ಯರಾಗಿ ಅಬ್ದುಲ್ ಕರೀಂ ಕಾರಂದೂರು, ಆದಂ ಮಂಜೋಟ್ಟಿ, ದಾವೂದ್ ಸಾಹೇಬ್ , ಸುಲೈಮಾನ್ ಅಬ್ಬು, ನಝೀರ್ ಕಾಂತಿಜಾಲ್, ಹಮೀದ್ ಬಾವಿಬಳಿ, ಅಬೂಬಕ್ಕರ್ ಮಂಜೋಟ್ಟಿ, ಮುಸ್ತಫಾ ಮಂಜೋಟ್ಟಿ, ನಿಝಾಮ್ ಗಿಂಡಾಡಿ , ಸಮೀರ್ ಮಸೀದಿ ಬಳಿ. ಹಸನ್ ಗಿಂಡಾಡಿ, ಬಶೀರ್ ಮಸೀದಿ ಬಳಿ, ಹಸೈ ಮಸೀದಿ ಬಳಿ, ಇಬ್ರಾಹಿಂ ಮಂಜೋಟ್ಟಿ, ಅಕ್ಬರ್ ಮಟ್ಲ, ‌ಉಸ್ಮಾನ್ ಕಾಂತಿಜಾಲ್ ,ಇಬ್ರಾಹಿಮ್ ಹೊಳೆಬದಿ, ಮುಬಾರಕ್ ಮಂಜೋಟ್ಟಿ ಆಯ್ಕೆಯಾದರು.

Leave a Comment

error: Content is protected !!