ಮಂಜೊಟ್ಟಿ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ಇದರ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿಗಳ ಸಂಸತ್ತಿನ ಚುನಾವಣೆಯು ಜೂ.17 ರಂದು ನಡೆಯಿತು.
ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ ಉದ್ದೇಶದಿಂದ ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿ ಮತದಾನದ ಪ್ರಕ್ರಿಯೆ ನಡೆಸಲಾಯಿತು. ಚುನಾವಣಾ ಕಣದಲ್ಲಿದ್ದ ವಿದ್ಯಾರ್ಥಿಗಳ ಪೈಕಿ ಶಾಲಾ ನಾಯಕನಾಗಿ ಮೊ| ರೌಫ್ಹ್ ಮತ್ತು ಉಪನಾಯಕನಾಗಿ ಮೊ| ಹಪೀಝ್, ಶಿಸ್ತುಪಾಲನ ಮಂತ್ರಿಗಳಾಗಿ ಮೊ| ಸಾದ್ ಮತ್ತು ಹಿಫ್ಸಾ ಬೇಗಮ್, ಕ್ರೀಡಾ ಮಂತ್ರಿಗಳಾಗಿ ಮೊ| ಶಮ್ಮಾಝ್ ಶರೀಫ್ ಮತ್ತು ಜಲಾಲುದ್ದೀನ್ ಮುನಾವರ್, ಆರೋಗ್ಯ ಮಂತ್ರಿಗಳಾಗಿ ಮೊ| ಹಾಸಿಮ್ ಮತ್ತು ಆಯಿಷತ್ ಲಿಫ್ರ, ಸ್ವಚ್ಛತಾ ಮಂತ್ರಿಗಳಾಗಿ ಮೊ| ಸುಹೈಬ್ ಮತ್ತು ಮೊ| ಝಿಷಾನ್, ಗ್ರಂಥಾಲಯ ಮಂತ್ರಿಗಳಾಗಿ ಫರ್ಹಾನ್ ಆಲಿ ಮತ್ತು ಮೊ| ರಫಾಝ್, ಸಾಂಸ್ಕೃತಿಕ ಮಂತ್ರಿಗಳಾಗಿ ಹುಸ್ನಾ ಬೇಗಮ್ ಮತ್ತು ರಫಾ ಅಸ್ವಿಯ, ಶಿಕ್ಷಣ ಮಂತ್ರಿಗಳಾಗಿ ಆಯಿಷತ್ ರಫಾ ಮತ್ತು ಮೊ| ಜಾಫರ್ ಆಯ್ಕೆಯಾದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜಾಕಿನ್ ಬಿನ್ರವರ ಮಾರ್ಗದರ್ಶನದಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಾಲಾ ಶಿಕ್ಷಕರುಗಳು ಉಪಸ್ಥಿತರಿದ್ದರು.