30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶುಭಾರಂಭ

ಜೂ.21: ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ‘ಕ್ಷೀರಾಮೃತ’ ಉದ್ಘಾಟನೆ

ಅಳದಂಗಡಿ: ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ‘ಕ್ಷೀರಾಮೃತ’ ಉದ್ಘಾಟನಾ ಸಮಾರಂಭವು ಜೂ.21 ರಂದು ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲ ಉದ್ಘಾಟಿಸಿ, ಸೂಳಬೆಟ್ಟು ಹಾ.ಉ.ಸ.ಸ ಅಧ್ಯಕ್ಷ ನಿರಂಜನ ಜೋಶಿ ಸಭಾಧ್ಯಕ್ಷತೆ ವಹಿಸಲಿರುವರು.

ಶಾಸಕ ಹರೀಶ್ ಪೂಂಜ ಕಚೇರಿ ಉದ್ಘಾಟಿಸಲಿದ್ದಾರೆ. ಮಂಗಳೂರು ದ.ಕ.ಸ.ಹಾ. ಅಧ್ಯಕ್ಷೆ ಸುಚರಿತ ಶೆಟ್ಟಿ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಆಡಳಿತ ಕೊಠಡಿಯ ಉದ್ಘಾಟನೆಯನ್ನು ಮಂಗಳೂರು ದ.ಕ.ಸ.ಹಾ. ಉಪಾಧ್ಯಕ್ಷ ಎಸ್.ಬಿ ಜಯರಾಮ ರೈ ಬಳಜ್ಜ ನೆರವೇರಿಸಲಿದ್ದಾರೆ. ನಾಮ ಫಲಕದ ಉದ್ಘಾಟನೆಯನ್ನು ಮಂಗಳೂರು ಹಾ.ಒಕ್ಕೂಟ ದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಮಾಡಲಿದ್ದಾರೆ. ಪಶು ಆಹಾರ ಗೋದಾಮುವಿನ ಉದ್ಘಾಟನೆಯನ್ನು ಹಾ. ಒಕ್ಕೂಟದ ನಿರ್ದೇಶಕ ನಿರಂಜನ ಬಾವಂತಬೆಟ್ಟು ಮಾಡಲಿದ್ದಾರೆ. ಸಭಾ ಭವನದ ಉದ್ಘಾಟನೆಯನ್ನು ಹಾ. ಒಕ್ಕೂಟದ ನಿರ್ದೇಶಕ ಪದ್ಮಾನಾಭ ಶೆಟ್ಟಿ ಅರ್ಕಜೆ ನೆರವೇರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ನ ಸದಸ್ಯರಾದ ಪ್ರತಾಪಸಿಂಹ ನಾಯಕ್, ಹರೀಶ್ ಕುಮಾರ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು, ಮಂಗಳೂರು ಹಾ.ಒಕ್ಕೂಟ ನಿರ್ದೇಶಕರುಗಳು ಭಾಗವಹಿಸಲಿದ್ದಾರೆಂದು ಸೂಳಬೆಟ್ಟು ಹಾ.ಉ.ಸ.ಸ ಅಧ್ಯಕ್ಷ ನಿರಂಜನ ಜೋಶಿ ತಿಳಿಸಿದ್ದಾರೆ.

Related posts

ಬೆಳ್ತಂಗಡಿ ಜ್ಞಾನವಿಕಾಸ ಸಂಯೋಜಕರ ಕ್ರಿಯಾಯೋಜನೆ ಸಭೆ

Suddi Udaya

ಮಚ್ಚಿನ ಜಲಾಯನ ಸಮಿತಿಯಿಂದ ಅರ್ಹ ಫಲಾನುಭವಿಗಳಿಗೆ ಕೋಳಿಮರಿ ವಿತರಣೆ

Suddi Udaya

ಅಳದಂಗಡಿ ಚಾಣಕ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಉಜಿರೆ ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಯುಗಾದಿ ಹಾಗೂ ರಂಝಾನ್ ಹಬ್ಬದ ಪ್ರಯುಕ್ತ ವಿಶೇಷ ಆಫರ್: ಪ್ರತಿ ಖರೀದಿ ಮೇಲೆ ಶಾಪಿಂಗ್ ವೊಚರ್

Suddi Udaya

ಅಕ್ರಮವಾಗಿ ಕಡಿದು ಸಂಗ್ರಹಿಸಿದ್ದ ಮರಮಟ್ಟು ವಶಕ್ಕೆ

Suddi Udaya

ಕರ್ನಾಟಕದ ಆರ್ಥಿಕ ಪರಿಸ್ಥಿತಿ ನಿಭಾಯಿಸುವಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಫಲ: ವಿಧಾನಪರಿಷತ್ ಶಾಸಕ ಕೆ‌.ಪ್ರತಾಪ್ ಸಿಂಹ ನಾಯಕ್ ಆರೋಪ

Suddi Udaya
error: Content is protected !!