24.6 C
ಪುತ್ತೂರು, ಬೆಳ್ತಂಗಡಿ
May 23, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿವರದಿ

ಚಾರ್ಮಾಡಿ ತ್ರಿವರ್ಣ ಸಂಜೀವಿನಿ ಗ್ರಾ. ಪಂ. ಮಹಿಳಾ ಒಕ್ಕೂಟದ ಮಾಸಿಕ ಸಭೆ

ಚಾರ್ಮಾಡಿ: ತ್ರಿವರ್ಣ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ (ರಿ) ಗ್ರಾಮ ಪಂಚಾಯಿತಿ ಚಾರ್ಮಾಡಿ ಇದರ ಮಾಸಿಕ ಸಭೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಚಂದ್ರಾವತಿ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ನಿಧನರಾದ ಒಕ್ಕೂಟದ ಕಾರ್ಯದರ್ಶಿ ಮತ್ತು ಸ್ವಚ್ಛ ಸಂಕೀರ್ಣ ಘಟಕದ ಮೇಲ್ವಿಚಾರಕಿ ಒಕ್ಕೂಟದ ಸಕ್ರಿಯ ಕೆಲಸಗಳಲ್ಲಿ ಗುರುತಿಸಿಕೊಂಡ ಶ್ರೀಮತಿ ತೇಜಶ್ರೀರವರಿಗೆ ಮೌನ ಪ್ರಾರ್ಥನೆ ಮೂಲಕ ಗೌರವ ನಮನವನ್ನು ಸಲ್ಲಿಸಲಾಯಿತು.

ಈ ಸಭೆಯಲ್ಲಿ ಒಕ್ಕೂಟದಲ್ಲಿ ಕಾರ್ಯನಿರ್ವಹಿಸಲು ವಿವಿಧ ಸಖಿ ಗಳ ಆಯ್ಕೆ ಲೋಕೋಸ್ ಪ್ರಗತಿ, ಸರಕಾರದ ಆದೇಶಗಳ ಕುರಿತು ಚರ್ಚೆ ಸಂಘಟನೆಯಿಂದ ಸಮೃದ್ಧಿ ಅಭಿಯಾನ ಕಾರ್ಯಕ್ರಮದಡಿ ಹೊಸ ಸಂಘಗಳನ್ನು ರಚಿಸುವ ಕುರಿತು ಮಾಹಿತಿ, ಮುಂದಿನ ತಿಂಗಳು ಮಹಾಸಭೆಯನ್ನು ನಡೆಸುವ ದಿನಾಂಕವನ್ನು ನಿಗದಿಪಡಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಜೊತೆ ಕಾರ್ಯದರ್ಶಿ ಶ್ರೀಮತಿ ಜಯಂತಿ ಕೋಶಾಧಿಕಾರಿ ಪ್ರೇಮ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಶಾರದಾ, ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಎಂಬಿಕೆ ಭವ್ಯರವರು ಕಾರ್ಯಕ್ರಮವನ್ನು ನಿರೂಪಿಸಿ, ರಮ್ಯಾ ರವರು ಧನ್ಯವಾದ ವಿತ್ತರು.

Related posts

ನಡ ಸರಕಾರಿ ಪ್ರೌಢಶಾಲೆಯಲ್ಲಿ ನೀರು ನೈರ್ಮಲ್ಯ ಸ್ವಚ್ಛ ಗ್ರಾಮ ಚಿತ್ರ ಪ್ರದರ್ಶನ ಮತ್ತು ಮಾಹಿತಿ ಕಾರ್ಯಾಗಾರ

Suddi Udaya

ನೆರಿಯದಲ್ಲಿ ಬಿದಿರು ಕೃಷಿ ಮಾಹಿತಿ ಸಭೆ

Suddi Udaya

ಧರ್ಮಸ್ಥಳ ಯೋಜನೆಯ ಕಾರ್ಯಕ್ರಮ: ರಾಜ್ಯಾದ್ಯಂತ 1000 ಶಾಲೆಗಳಿಗೆ ಜ್ಞಾನದೀಪ ಗೌರವ ಶಿಕ್ಷಕರ ನಿಯೋಜನೆ

Suddi Udaya

ಎ.ಕೃಷ್ಣಪ್ಪ ಪೂಜಾರಿಯವರಿಗೆ ’ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ

Suddi Udaya

ಜ.28: ಇಂದಬೆಟ್ಟುವಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಶಿಬಿರ

Suddi Udaya

ಕುಂಟಿನಿ ಅಲ್ ಬುಖಾರಿ ಹಾಗೂ ಮುಹಿಯುದ್ದೀನ್ ಅರಬಿಕ್ ಸೆಕೆಂಡರಿ ಮದ್ರಸ ಆಡಳಿತ ಸಮಿತಿಯ ಮಹಾಸಭೆ: ಸಮಿತಿ ರಚನೆ

Suddi Udaya
error: Content is protected !!