24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ದರ್ಭೆತಡ್ಕ ಸುದೆಗಂಡಿಯಲ್ಲಿ ಕಿರು ಸೇತುವೆಯ ದುರಸ್ತಿ ಕಾರ್ಯದ ಬಗ್ಗೆ ಗ್ರಾಮಸ್ಥರ ಸಭೆ: ಸಮಿತಿ ರಚನೆ

ಹತ್ಯಡ್ಕ : ಹತ್ಯಡ್ಕ ಗ್ರಾಮದ ದರ್ಭೆತಡ್ಕ ಸುದೆಗಂಡಿ ಕಪಿಲಾನದಿ ಕಿರು ಸೇತುವೆಯು ಶಿಥಿಲಾವಸ್ಥೆಯಲ್ಲಿರುವುದರಿಂದ ಅದರ ದುರಸ್ತಿ ಕೆಲಸ ನಡೆಸುವ ಬಗ್ಗೆ ದರ್ಭೆತಡ್ಕ ಶ್ರೀ ಪರಶುರಾಮ ದೇವಸ್ಥಾನದ ಸಭಾಂಗಣದಲ್ಲಿ ಗ್ರಾಮಸ್ಥರ ಸಭೆ ಜೂ.19 ರಂದು ನಡೆಯಿತು.
ಅರಸಿನಮಕ್ಕಿ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಸೌಮ್ಯಾ ತುಳುಪುಳೆ ಹಾಜರಿದ್ದರು.


ಈ ಸಂದರ್ಭದಲ್ಲಿ ಕಪಿಲಾನದಿ ಸೇತುವೆ ದುರಸ್ತಿ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಕರುಣಾಕರ ಗೋಗಟೆ ಹೊಸ್ಮಠ. ಕಾರ್‍ಯದರ್ಶಿಯಾಗಿ ಪ್ರಶಾಂತ್ ಹೆಬ್ಬಾರ್ ನೆಲ್ಲಿತಡ್ಕ ಆಯ್ಕೆಯಾದರು. ಶೀಘ್ರದಲ್ಲಿ ಪಂಚಾಯತ್ ಗ್ರಾಮಸ್ಥರ ಸಹಕಾರದೊಂದಿಗೆ ಸೇತುವೆ ದುರಸ್ತಿ ಕೆಲಸ ಮಾಡುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಜೋಸೆಫ್ ಪಿರೇರಾ, ವೆಂಕಟೇಶ ಮೆಹೆಂದಳೆ, ಕಾಶಿನಾಥ ಗೋಗಟೆ, ವಾಮನ ತಾಮ್ಹನ್‌ಕರ್, ಧರ್ಮರಾಜ ಗೌಡ, ನರಸಿಂಹ ಪಾಳಂದೆ, ಉದಯಕುಮಾರ್ ಅಭ್ಯಂಕರ್, ವರದಶಂಕರ ದಾಮ್ಲೆ, ರಾಜೇಶ್ ಬೊಳ್ಳೋಡಿ ಉಪಸ್ಥಿತರಿದ್ದರು.

Related posts

ವೇಣೂರು ಐಟಿಐಗೆ ಶೇ. 100 ಫಲಿತಾಂಶ

Suddi Udaya

ಬಳಂಜ: 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ: ಶ್ರದ್ದಾ ಭಕ್ತಿಯಿಂದ ಗಣಪತಿ ದೇವರ ಆರಾಧನೆ, ಸಾವಿರಾರು ಭಕ್ತರು ಭಾಗಿ

Suddi Udaya

ಬೆಳ್ತಂಗಡಿ ಕೋಟಕ್ ಲೈಫ್ 2ನೇ ವರ್ಷಕ್ಕೆ ಪಾದಾರ್ಪಣೆ

Suddi Udaya

ಬಸ್ ಸಮಸ್ಯೆ: ಜುಲೈ 1ರಂದು ಬೆಳ್ತಂಗಡಿಯಲ್ಲಿ ಶಾಸಕರಿಂದ ಜನಸ್ಪಂದನ ಕಾರ್ಯಕ್ರಮ: ಸಾವ೯ಜನಿಕ ಅಹವಾಲು ಸ್ವೀಕಾರ ಮತ್ತು ಮಾಹಿತಿ ಕಾರ್ಯಕ್ರಮ

Suddi Udaya

ವೇಣೂರು: ಭ| ಬಾಹುಬಲಿಸ್ವಾಮಿ ಮೂರ್ತಿಗೆ ಕೊನೆಯ ಮಹಾಮಸ್ತಕಾಭಿಷೇಕ

Suddi Udaya

ಸಮಾಜಸೇವಕ ಚಾಂಡಿ ರವರಿಗೆ ವಿನ್ಸೆಂಟ್ ಡಿ’ಪೌಲ್ ದಿನದಲ್ಲಿ ಸನ್ಮಾನ

Suddi Udaya
error: Content is protected !!