ಬೆಳ್ತಂಗಡಿ: ರಾಜ್ಯ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಅನ್ನಭಾಗ್ಯಕ್ಕೆ ಕೇಂದ್ರ ಸರಕಾರ ಅಕ್ಕಿ ಕೊಡದೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅನ್ನದ ತಟ್ಟೆ ಬಡಿಯುವ ಪ್ರತಿಭಟನೆ ಜೂ.20 ರಂದು ಬೆಳ್ತಂಗಡಿ ಮಿನಿವಿಧಾನ ಸೌಧದ ಎದರು ನಡೆದು ನಂತರ ಅಕ್ಕಿ ಒದಗಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.
ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಗೃಹಲಕ್ಷ್ಮೀ ಮತ್ತು ಭಾಗ್ಯಲಕ್ಷ್ಮೀ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾಜಿ ಶಾಸಕ ವಸಂತ ಬಂಗೇರರ ನೇತೃತ್ವದಲ್ಲಿ ಕಾರ್ಯಕರ್ತರು ‘ಕೇಂದ್ರ ಸರಕಾರ ರಾಜ್ಯಕ್ಕೆ ಅಕ್ಕಿ ಕೊಡದೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ, ಅನ್ನದ ತಟ್ಟೆಯನ್ನು ಕೈಯಲ್ಲಿ ಹಿಡಿದು ಬಡಿಯುತ್ತಾ ರಸ್ತೆಯ ಮೂಲಕ ಮೆರವಣಿಗೆಯಲ್ಲಿ ಮಿನಿ ವಿಧಾನ ಸೌಧಕ್ಕೆ ತೆರಳಿದರು. ಅಲ್ಲಿ ತಟ್ಟೆ ಬಡಿದು ಪ್ರತಿಭಟನೆ ವ್ಯಕ್ತಪಡಿಸಿ, ನಂತರ ಅನ್ನ ಭಾಗ್ಯಕ್ಕೆ ಅಕ್ಕಿಯನ್ನು ಒದಗಿಸುವಂತೆ ಪ್ರಧಾನಿಯವರಿಗೆ ತಹಸೀಲ್ದಾರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ , ಜಿ.ಪಂ. ಮಾಜಿ ಸದಸ್ಯರಾದ ಶೇಖರ್ ಕುಕ್ಕೇಡಿ, ನಮೀತಾ ಪೂಜಾರಿ, ಹಿರಿಯರಾದ ರಾಜು ಪೂಜಾರಿ ಕಾಶಿಪಟ್ನ , ಶ್ರೀನಿವಾಸ್ ಉಜಿರೆ ,ಸತೀಶ್ ಕೆ ಕಾಶಿಪಟ್ನ, ಜಯವಿಕ್ರಂ, ಅಬ್ದುಲ್ ಕರೀಂ ಗೇರುಕಟ್ಟೆ ,ಸತೀಶ್ ಹೆಗ್ಡೆ ವೇಣೂರು ,ಅರವಿಂದ ಶೆಟ್ಟಿ ಖಂಡಿಗ ,ಹರೀಶ್ ಪೊಕ್ಕಿ ,ರಮೇಶ್ ಪಡ್ಡಯಿಮಜಲು, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶ್ರೀಮತಿ ವಂದನಾ ಭಂಡಾರಿ, ಜೆಸಿಂತಾ ಮೋನಿಸ್, ಹರಿಪ್ರಸಾದ್ ಹೊಸಂಗಡಿ ,ಮುಖಂಡರಾದ ಅಯೂಬ್ ಡಿ.ಕೆ ಕಲ್ಲೇರಿ, ವಿನ್ಸೆಂಟ್ ಡಿ ಸೋಜ ಮಡಂತ್ಯಾರು ,ಇಸ್ಮಾಯಿಲ್ ಕೆ ಪೆರಿಂಜೆ, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಮ್, ಮರಿತ ಪಿಂಟೋ ,ಪ್ರವೀಣ್ ಗೌಡ ,ಅಶ್ರಫ್ ಶಾಂತಿನಗರ , ಸೇರಿದಂತೆ ಪಕ್ಷದ ಮುಖಂಡರುಗಳು ಕಾರ್ಯಕರ್ತರುಗಳು ಪಾಲ್ಗೊಂಡರು.