March 7, 2026
ಚಿತ್ರ ವರದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಸೂಳಬೆಟ್ಟು ಡೋಂಗ್ರೆ ಕುಟುಂಬಸ್ಥರಿಂದ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಶೈಕ್ಷಣಿಕ ಪರಿಕರಗಳ ವಿತರಣೆ

ಸೂಳಬೆಟ್ಟು : ಸ.ಕಿ.ಪ್ರಾಥಮಿಕ ಶಾಲೆ ಸೂಳಬೆಟ್ಟು ಹಾಗೂ ಇಲ್ಲಿನ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸೂಳಬೆಟ್ಟು ಡೋಂಗ್ರೆ ಕುಟುಂಬಸ್ಥರು ರೋಟರಿ ಕ್ಲಬ್ ಬೆಳ್ತಂಗಡಿ ಮೂಲಕ ಪುಸ್ತಕಗಳನ್ನು ಹಾಗೂ ಶೈಕ್ಷಣಿಕ ಪರಿಕರಗಳನ್ನು ಉಚಿತವಾಗಿ ಜೂ 20 ರಂದು ವಿತರಿಸಿದರು.
15 ನೇ ವರ್ಷದ ಈ ಕಾರ್ಯಕ್ರಮವನ್ನು ಬೆಳ್ತಂಗಡಿ ರೋಟರಿಯ ನಿಯೋಜಿತ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಉದ್ಘಾಟಿಸಿ, ಡೋಂಗ್ರೆ ಕುಟುಂಬದವರು ಸಮಾಜದ ಏಳಿಗೆಗಾಗಿ ಸಂಪಾದನೆಯ ಒಂದು ಭಾಗವನ್ನು ವಿನಿಯೋಗಿಸುವ ಮನೋಭಾವವನ್ನು ಇಟ್ಟುಕೊಂಡಿರುವುದು ಮಾದರಿಯಾಗಿದೆ ಎಂದರು.
ರೋಟರಿಯ ನಿಯೋಜಿತ ಕಾರ್ಯದರ್ಶಿ ವಿದ್ಯಾಕುಮಾರ್, ಡಾ| ಸುಷ್ಮಾ ಡೋಂಗ್ರೆ, ಗ್ತಾ.ಪಂ.ಮಾಜಿ ಅಧ್ಯಕ್ಷ ವಿಶ್ವನಾಥ ಡೋಂಗ್ರೆ ಅತಿಥಿಗಳಾಗಿದ್ದರು.


ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಮೋದ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.
ಶಾಲಾ ಸಹ ಶಿಕ್ಷಕಿ ಉಮೈಬಾ, ಅಂಗನವಾಡಿ ಕಾರ್ಯಕರ್ತೆ ಶಕುಂತಲಾ, ಸಿಬ್ಬಂದಿಗಳಾದ ಲವಿನಾ, ಮಮತಾ, ಚಿತ್ರಾಕ್ಷಿ ಸಹಕರಿಸಿದರು.
ಮಕ್ಕಳಿಗೆ ಪುಸ್ತಕ, ಚೀಲ, ಕೊಡೆ ಇತ್ಯಾದಿಗಳ ಕೊಡುಗೆಗಳನ್ನು ನೀಡಿದ ಡಾ| ಶಶಿಧರ ಡೋಂಗ್ರೆ ಪ್ರಸ್ತಾವಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಲೀನಾ ವೇಗಸ್ ಸ್ವಾಗತಿಸಿ ವಂದಿಸಿದರು.

Related posts

ಉರುವಾಲು: ಉರುವಾಲುಪದವು ಶಿವಾಜಿನಗರದ ಶ್ರೀ ಮಹಮ್ಮಾಶ್ರೀ ದೇವಿಯ ಪ್ರತಿಷ್ಠಾ ಮಹೋತ್ಸವ – ಧಾರ್ಮಿಕ ಸಭೆ

Suddi Udaya

ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ನಿಧನಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸಂತಾಪ

Suddi Udaya

ಉಜಿರೆ ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿಯ‌ ಖಾತೆಯಿಂದ ರೂ. 3.14ಲಕ್ಷ ನಗದು ಅಪಹರಣ

Suddi Udaya

ಧರ್ಮಸ್ಥಳ ಸಹಕಾರಿ ಸಂಘಕ್ಕೆ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಉತ್ತಮ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಓಡಿಲ್ನಾಳ: ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya

ಸಹೋದರರಿಬ್ಬರು ಒಂದೇ ದಿನ ನಿಧನ

Suddi Udaya
error: Content is protected !!