ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನ ವಿವಿಧ ಘಟಕಗಳಿಂದ ವಿಶ್ವ ಯೋಗ ದಿನಾಚರಣೆ

Suddi Udaya

ಬೆಳ್ತಂಗಡಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿ ರೋವರ್ ರೇಂಜರ್ಸ್, ಯುವರ್ ರೆಡ್ ಕ್ರಾಸ್ ಘಟಕ, ಎನ್‌ಸಿಸಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ| ಸುಬ್ರಹ್ಮಣ್ಯ ಕೆ. ಯೋಗ ದಿನಾಚರಣೆಯ ಮಹತ್ವದ ಬಗ್ಗೆ ವಿವರಿಸಿದರು ಹಾಗೂ ಯೋಗ ಮಾಡುವುದರಿಂದ ಆಗುವ ದೈಹಿಕ ಮತ್ತು ಮಾನಸಿಕ ಅನುಕೂಲತೆಗಳ ಬಗ್ಗೆ ತಿಳಿಸಿದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಎನ್ ಸಿ ಸಿ ನೇವಿ ಘಟಕದ ಲೆಫ್ಟಿನೆಂಟ್ ಡಾ| ಶೈಲೇಶ್ ಕುಮಾರ್ ಡಿಹೆಚ್ ಹಾಗೂ ಅಂತಿಮ ಸ್ನಾತಕೋತ್ತರ ವಿಭಾಗದ ಕುಮಾರಿ ಲತಾ ಇವರು ಯೋಗಾಸನದ ಪ್ರಾತ್ಯಕ್ಷಿತೆ ಮಾಡಿ ವಿದ್ಯಾರ್ಥಿಗಳಿಗೆ ಯೋಗಾಸನವನ್ನು ಮಾಡಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಭಾಗದ ಎಲ್ಲ ವಿದ್ಯಾರ್ಥಿಗಳು ಹಾಗೂ ಎಲ್ಲಾ ಪ್ರಾಧ್ಯಾಪಕ ವೃಂದದವರು ಸಕ್ರಿಯವಾಗಿ ಭಾಗವಹಿಸಿದರು.

ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ರವಿ ಎಮ್ ಎನ್ ಸ್ವಾಗತಿಸಿದರು. ರೇಂಜಸ್ ಲೀಡರ್ ಪ್ರೊ| ರಾಜೇಶ್ವರಿ ವಂದಿಸಿದರು.

Leave a Comment

error: Content is protected !!