ಗುರುವಾಯನಕೆರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ತಾಲೂಕಿನಲ್ಲಿ ಮುಂಗಾರು ಯಾಂತ್ರಿಕ್ರತ ಭತ್ತ ಬೇಸಾಯಕ್ಕೆ ಅಳದಂಗಡಿ ತಿಮ್ಮಣ್ಣರಸರಾದ ಡಾ| ಪದ್ಮ ಪ್ರಸಾದ್ ಅಜಿಲರು ಅರಸರು ಯವರು ಯಾಂತ್ರಿಕ್ರತ ಭತ್ತ ಬೇಸಾಯಕ್ಕೆ ಚಾಲನೆ ನೀಡಿ ಭತ್ತವು ನಮ್ಮ ರಾಜ್ಯದ ಅತೀ ಪ್ರಮುಖವಾದ ಹಾಗೂ ಹೆಚ್ಚು ಬೇಡಿಕೆ ಇರುವ ಆಹಾರ ಬೆಳೆಯಾಗಿದೆ ಭತ್ತ ಕೃಷಿಯಲ್ಲಿ ಯಂತ್ರಶ್ರೀ ಮಾದರಿಯಲ್ಲಿ ಭತ್ತ ಕೃಷಿ ಮಾಡಿದರೆ ಕಡಿಮೆ ಸಮಯದಲ್ಲಿ ನಾಟಿ ಮುಗಿಯುವುದು ಕಡಿಮೆ ಬಿತ್ತನೆ ಬೀಜದಿಂದ ಕಡಿಮೆ ಸಮಯದಲ್ಲಿ ಸಸಿ ಮಾಡಿ ತಯಾರಿ ಮಾಡಬಹುದು ಒOದು ಎಕ್ರೆ ಗೆ 70 ಸಸಿ ಮಾಡಬೇಕಾಗತ್ತೆ ಎಲ್ಲಾ ರೈತರು ಯಾಂತ್ರಿಕ್ರತ ವಾಗಿ ಕೃಷಿ ಮಾಡಬೇಕು ಎಂದು ಕಾರ್ಯಕ್ರಮಕ್ಕೆ ಶುಭ ನುಡಿದರು.
ಕಾರ್ಯಕ್ರಮದಲ್ಲಿ ಯಂತ್ರ ಶ್ರೀ ಯೋಜನಾಧಿಕಾರಿಯಾದ ಜಯಾನಂದ್ ಗುರುವಾಯನಕೆರೆ ಯೋಜನಾಧಿಕಾರಿಗಳಾದ ದಯಾನಂದ್ ಬೆಳ್ತಂಗಡಿ ಪ್ರಬಂಧಕರು ಸಚಿನ್ ಕುಮಾರ ನಾರಾವಿ ಮೆನೇಜರ್ ಸಚಿನ್, ,ಕೃಷಿ ಮೇಲ್ವಿಚಾರಕರು ಕೃಷ್ಣ ಗೌಡ, ಮೇಲ್ವಿಚಾರಕರು ಸುಮಂಗಲ ಹಾಗೂ ಸಂಸ್ಥೆಯ ಮೆಕ್ಯಾನಿಕಲ್ ಉಲ್ಲಾಸ್ ಕುಮಾರ ಯಂತ್ರ ಚಾಲಕರು ಜಗದೀಶ್, ವೇಣುಚಂದ್ರ, ಯಂತ್ರಶ್ರೀ ಯೋಧ ಪ್ರಶಾಂತ್ ಸೇವಾಪ್ರತಿನಿಧಿ, ಹೇಮಲತಾ ವಿಪತ್ತು ಮಾಸ್ಟರ್ ಶ್ರೀಕಾಂತ್ ಒಕ್ಕೂಟದ ಅಧ್ಯಕ್ಷರು ಮಂಜುನಾಥ್ ಆಚಾರ್ಯ ಭಜನಾ ಮಂಡಳಿ ಅಧ್ಯಕ್ಷರು ಗಣೇಶ್ ದೇವಾಡಿಗ ಸ್ಥಳೀಯ ರೈತರು ಊರಿನ ನಾಗರಿಕರು ಉಪಸ್ಥಿತರಿದ್ದರು.