April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಧಾರ್ಮಿಕ

ಕನ್ಯಾಡಿ ಸ್ವಾಮೀಜಿ ಚಾತುರ್ಮಾಸ್ಯ: ಜು.3ರಿಂದ ಆ.31ರವರೆಗೆ ಎಂಟು ಭಾನುವಾರ ಹೊರತುಪಡಿಸಿ ಇತರ ದಿನಗಳಲ್ಲಿ ಮೌನ ಚಾತುರ್ಮಾಸ್ಯ

ಕನ್ಯಾಡಿ:”ಲೋಕಕಲ್ಯಾಣ ಆತ್ಮೋನ್ನತಿಗಾಗಿ ಶ್ರೀ ಗುರುದೇವ ಮಠದಲ್ಲಿ ಜು. 3 ರಿಂದ ಆ.31 ರವರೆಗೆ 60 ದಿನಗಳ ಕಾಲ ಚಾತುರ್ಮಾಸ್ಯ ಕಾರ್ಯಕ್ರಮ ನಡೆಯಲಿದೆ” ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಅವರು ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಚಾತುರ್ಮಾಸ್ಯದ ಅಂಗವಾಗಿ ಜು.2ರಂದು ಸಂಜೆ ವ್ರತ ವಿಧಿವಿಧಾನ, ಸುದರ್ಶನ ಹೋಮ ಜು.3ರಂದು ಬೆಳಿಗ್ಗೆ ರಾಮ ತಾರಕ ಯಜ್ಞ, ಶ್ರೀ ರಾಮ ಕ್ಷೇತ್ರದ ಪರಿವಾರ ದೇವರುಗಳಿಗೆ ವಿಶೇಷ ಪೂಜೆ,ಪುರ ಪ್ರವೇಶ, ಬೆಳಿಗ್ಗೆ 11ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮೀನುಗಾರಿಕೆ ಸಚಿವ ಮಂಕಾಳ್ ಎಸ್.ವೈದ್ಯ ಉದ್ಘಾಟಿಸಲಿದ್ದು ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ. ದಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,ವಿವಿಧ ವಿಧಾನಸಭಾ ಕ್ಷೇತ್ರಗಳ ಶಾಸಕರು, ಮಾಜಿ ಸಚಿವರು,ಮಾಜಿ ಶಾಸಕರು ಭಾಗವಹಿಸಲಿದ್ದಾರೆ.ಪ್ರತಿದಿನ ಸಾಯಂಕಾಲ 6ರಿಂದ ಸಂಪೂರ್ಣ ರಾಮಾಯಣ ದರ್ಶನಂ, ಶ್ರೀಮದ್ ಭಾಗವತ ಸಪ್ತಾಹ, ಮಹಾಭಾರತ ಕಥಾ ಪ್ರವಚನ,ತಾಳಮದ್ದಳೆ, ಹರಿಕಥೆ ಭಕ್ತಿ ರಸಮಂಜರಿ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.

ಮೌನ ಚಾತುರ್ಮಾಸ್ಯ-ಈ ಬಾರಿಯ ಚಾತುರ್ಮಾಸ್ಯವನ್ನು ಮೌನ ಚಾತುರ್ಮಾಸ್ಯವಾಗಿ ಆಚರಿಸಲಿದ್ದು ಈ ಅವಧಿಯಲ್ಲಿ ಬರುವ 8 ಭಾನುವಾರಗಳನ್ನು ಹೊರತುಪಡಿಸಿ ಇತರ ದಿನಗಳಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಸ್ವಾಮೀಜಿಗಳ ದರ್ಶನ ಇರುವುದಿಲ್ಲ. ಭಾನುವಾರಗಳಂದು ಮಾತ್ರ ಸ್ವಾಮೀಜಿಗಳು ಪೂರ್ತಿ ದಿನ ಭಕ್ತಾದಿಗಳಿಗೆ ದರ್ಶನವನ್ನು ನೀಡಲಿರುವರು. ಸಮಾಲೋಚನೆ ಸಭೆ-ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಚಾತುರ್ಮಾಸ್ಯದ ಕುರಿತು ಸಮಾಲೋಚನೆ ಸಭೆ ಜರಗಿತು.

ಪ್ರಮುಖರಾದ ಭಗೀರಥ ಜಿ., ಶೈಲೇಶ್ ಕುಮಾರ್, ಕೇಶವ ಬೆಳಾಲು,ಭಾಸ್ಕರ ಧರ್ಮಸ್ಥಳ, ಅಭಿನಂದನ್ ಹರೀಶ್ ಕುಮಾರ್,ಚಂದನ್ ಕಾಮತ್,ಶ್ರೀನಿವಾಸರಾವ್, ಕೃಷ್ಣಪ್ಪ ಗುಡಿಗಾರ್,ಅಣ್ಣಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟಿ ತುಕಾರಾಮ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪೋಷಕ ಮತ್ತು ಶಿಕ್ಷಕ ಸಭೆ

Suddi Udaya

ಬೆಳ್ತಂಗಡಿ ಜ್ಯೋತಿ ಹಾಸ್ಪಿಟಲ್ ವತಿಯಿಂದ ನಾರಾವಿಯ ಕುತ್ಲೂರಿನಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ

Suddi Udaya

ಅರಸಿನಮಕ್ಕಿ ಶ್ರೀಗೋಪಾಲಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿಮಂಡಲ ರಚನೆ

Suddi Udaya

ಅಳದಂಗಡಿ: ರಿಕ್ಷಾ ಮತ್ತು ಇನೋವಾ ಕಾರು ಮಧ್ಯೆ ಅಪಘಾತ ಪ್ರಯಾಣಿಕರಿಗೆ ಗಾಯ

Suddi Udaya

ಭೂಮಿ ಬಾನೊದ ಸೊರೊ ತುಳು ಜನಪದ ವಿಡಿಯೋ ಹಾಡು ಹಾಗೂ “ವಿಸ್ಮೃತಿ – ಐತಿಹಾಸಿಕ ಸ್ಮಾರಕಗಳ ಮನನ ಕನ್ನಡ ಅಲ್ಬಂ ಹಾಡು ಲೋಕಾರ್ಪಣೆ

Suddi Udaya

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ

Suddi Udaya
error: Content is protected !!