ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬಗ್ಗೆ ವಿ.ಹಿಂ.ಪ ಹಾಗೂ ಭಜರಂಗದಳ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮನವಿ

Suddi Udaya

ಬೆಳ್ತಂಗಡಿ: ಗೋಹತ್ಯೆ ನಿಷೇಧ ಕಾಯ್ದೆಯನ್ನು ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ವಿ.ಹಿಂ.ಪ ಹಾಗೂ ಭಜರಂಗದಳ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಿಗೆ ಮನವಿ ಸಲ್ಲಿಸಿದ್ದಾರೆ.

ಬೆಳ್ತಂಗಡಿ ಠಾಣೆಗೆ ಮೂಲಕ ನೀಡಲಾದ ಈ ಮನವಿಯಲ್ಲಿ ಇದೇ ಜೂನ್ 29, 30, ಜುಲೈ 1 ರಂದು ತಾರೀಕಿನಂದು ಮತ್ತು ಇತರೆ ದಿನಗಳಂದೂ ಯಾವುದೇ ರೀತಿಯ ಗೋವಂಶ ವಧೆ / ಬಲಿ/ ಕುರ್ಬಾನಿ/ ಹತ್ಯೆ ಹಾಗು ಅಕ್ರಮ ಗೋಸಾಗಾಟವಾಗದಂತ ತಾವುಗಳು ಕ್ರಮಕೈಗೊಳ್ಳಬೇಕು. ಇದೇ ಸಂಧರ್ಭದಲ್ಲಿ ಗೋವುಗಳನ್ನು ಪಾಲಿಸುವವರ ಮನೆಯಿಂದ, ಬೀದಿಗಳಿಂದ, ಗುಡ್ಡಗಳಿಂದ ಗೋವುಗಳ ಕಳ್ಳತನವಾಗದಂತೆ ಅಹೋ ರಾತ್ರಿ ಗಸ್ತು ಹಾಗು ಅಗತ್ಯ ಇದ್ದಲ್ಲೆಲ್ಲ ನಾಕಾಬಂದಿ ಹಾಕಬೇಕಾಗಿ ಒತ್ತಾಯಿಸಿದ್ದಾರೆ.

ಜುಲೈ 2 ರ ತನಕ ಯಾರು ಕೂಡ ಖಾಲಿ ಜಾಗದಲ್ಲಿ ಅಥವಾ ಮನೆಯ ಅಂಗಳದಲ್ಲಿ ಗೋವಂಶವನ್ನು ತಂದು ಕಟ್ಟಿ ಹಾಕಿ ಶೇಖರಿಸದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಆ ರೀತಿ ಗೋವಂಶ ತಂದು ಕಟ್ಟಿ ಹಾಕಿದ್ದು ಕಂಡರೆ ತಕ್ಷಣ ಅದಕ್ಕೆ ಪಶು ಸಂಗೋಪನಾ ಇಲಾಖೆಯವರು ಕಿವಿಯೋಲೆ ಹಾಕಿಸಿ, ಫೋಟೋ ತೆಗೆದಿರಿಸಿ ಮಾಲಕರ ಬಳಿ ಮುಚ್ಚಳಿಕೆ ತೆಗೆದುಕೊಳ್ಳಬೇಕು, ಜೂಲೈ 3 ರಂದು ಗೋವಂಶಗಳು ಬದುಕಿರುವ ಬಗ್ಗೆ ಅದನ್ನು ಖಾತ್ರಿ ಪಡೆಸಿಕೊಳ್ಳಬೇಕು, ಜೂಲೈ 3 ರ ಮೊದಲು ದನ ತೀರಿ ಹೋದರೆ ಅದನ್ನು ಹೂಳದ ಪೊಲೀಸರಿಗೂ ಮತ್ತು ಪಶು ಸಂಗೋಪನಾ ಇಲಾಖೆಯವರಿಗೆ ತಿಳಿಸಿ ಧಫನ ಮಾಡಿದನ್ನು ಖಾತ್ರಿ ಮಾಡಬೇಕು. ಒಂದು ವೇಳೆ ಜೂಲೈ 3 ರಂದು ಪರಿಶೀಲಿಸುವಾಗ ಅ ಗೋವಂಶಗಳು ಕಂಡು ಬರದಿದ್ದಲ್ಲಿ ಅವರ ಮೇಲೆ ಗೋಹತ್ಯಾ ನಿಷೇಧ ಕಾಯಿದೆ 2020 ರ ಪ್ರಕಾರ ಪ್ರಕರಣ ದಾಖಲಿಸಬೇಕು ಎಂದು ಅಗ್ರಹಿಸಿದ್ದಾರೆ.

ಈ ಮನವಿ ನೀಡುವ ಸಂದರ್ಭದಲ್ಲಿ ಬೆಳ್ತಂಗಡಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಅಧ್ಯಕ್ಷ ದಿನೇಶ್ ಚಾರ್ಮಾಡಿ, ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ, ಸಂಯೋಜಕ ಸಂತೋಷ್ ಅತ್ತಾಜೆ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Leave a Comment

error: Content is protected !!