ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕಿನ ವತಿಯಿಂದ ಬೆಳ್ತಂಗಡಿ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಪ್ರಥಮ ನಾಟಿಗೆ ಫ್ರಾನ್ಸಿಸ್ ಮೀರಾoದ ಲಾಯಿಲ ಇವರ ಗದ್ದೆಯಲ್ಲಿ ಕೃಷಿ ಇಲಾಖೆಯ ಬೆಳ್ತಂಗಡಿಯ ಸಹಾಯಕ ಕೃಷಿ ನಿರ್ದೇಶಕರಾದ ರಂಜಿತ್ ಕುಮಾರ್ ಟಿ.ಎಂ ಚಾಲನೆಯನ್ನು ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆಯ ನಿರ್ದೇಶಕರಾದ ಮಹಾಬಲ ಕುಲಾಲ್ ಸಾಮಾನ್ಯ ಪದ್ಧತಿ ಮತ್ತು ಯಾಂತ್ರಿಕೃತ ಪದ್ಧತಿಗೆ ಇರುವಂತಹ ವ್ಯತ್ಯಾಸ, ಯಂತ್ರದ ಮೂಲಕ ಭತ್ತದ ಸಸಿಯ ನಾಟಿ, ಖರ್ಚು ಮತ್ತು ಆದಾಯ, ಬೆಳ್ತಂಗಡಿ ತಾಲೂಕಿನಲ್ಲಿ ಇರುವಂತಹ ಭತ್ತದ ಗದ್ದೆಯನ್ನು ಉಳಿಸಿಕೊಂಡು ಭತ್ತ ಕೃಷಿಯನ್ನು ಯಾಂತ್ರಿಕರಣದ ಮೂಲಕ ಪ್ರತಿಯೊಬ್ಬ ಭತ್ತ ಕೃಷಿಕನೂ ಮಾಡಬೇಕಾಗಿದೆ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕರಾದ ರಂಜಿತ್ ಕುಮಾರ್ ಟಿ ಎಂ ರವರು ಕೃಷಿ ಇಲಾಖೆಯಲ್ಲಿ ಜಯ, ಜ್ಯೋತಿ MO4 ಭತ್ತದ ಬೀಜ ಸಹಾಯಧನದಲ್ಲಿ ಸಿಗುತ್ತಿದ್ದು ಇದರ ಪ್ರಯೋಜನವನ್ನು ಕೃಷಿಕರು ಪಡೆಯಬೇಕು, ಭತ್ತದ ಕೃಷಿಯ ಉಳಿವಿಕೆಗಾಗಿ ಪ್ರತಿ ಹಂತದಲ್ಲೂ ಯಾಂತ್ರಿಕರಣದ ಬಳಕೆಯನ್ನು ಮಾಡಿ,ಸಮಯಕ್ಕೆ ಸರಿಯಾಗಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯಲು ವೈಜ್ಞಾನಿಕವಾಗಿ ಭತ್ತ ಕೃಷಿಯನ್ನು ಯಾಂತ್ರಿಕರಣದ ಮೂಲಕ ಮಾಡಿದಾಗ ಹೆಚ್ಚಿನ ಲಾಭವನ್ನು ಪಡೆಯುಬಹುಗಿದೆ,ಯುವಕರು ಹಡಿಲು ಭೂಮಿಗಳನ್ನು ಅಭಿವೃದ್ಧಿ ಪಡಿಸಿ ಭತ್ತ ಕೃಷಿಯನ್ನು ಉಳಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ತಾಲೂಕಿನ ಯೋಜನಾಧಿಕಾರಿಗಳಾದ ಸುರೇಂದ್ರ ಕುಮಾರ್, ಕೃಷಿಕರಾದ ಫ್ರಾನ್ಸಿಸ್ ಮಿರಾoದ, ಸಿ ಎಚ್ ಎಸ್ ಸಿ ಪ್ರಬಂಧಕರಾದ ಸಚಿನ್ ಕುಮಾರ್, ವಲಯ ಮೇಲ್ವಿಚಾರಕರಾದ ಶ್ರೀಮತಿ ಶಶಿಕಲಾ, ಸೇವಾ-ಪ್ರತಿನಿಧಿಗಳು ಹಾಗೂ ಭತ್ತ ಕೃಷಿ ಇರುವ ರೈತರು ಉಪಸ್ಥಿತರಿದ್ದರು.
ತಾಲೂಕಿನ ಕೃಷಿ ಮೇಲ್ವಿಚಾರಕರಾದ ರಾಮಕುಮಾರ್ ಸ್ವಾಗತಿಸಿ ವಂದಿಸಿದರು.
ಫ್ರಾನ್ಸಿಸ್ ಮಿರಾoದರವರ 2 ಎಕ್ರೆ ಭತ್ತದ ಗದ್ದೆಯನ್ನು ಯಂತ್ರದ ಮೂಲಕ ಈ ಸಂದರ್ಭ ನಾಟಿ ಮಾಡಲಾಯಿತು.