ಮುಂಡಾಜೆ : ಮುಂಡಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಂದಿನ 5 ವರ್ಷ ಗಳ ಅವಧಿಗೆ ಅಧ್ಯಕ್ಷರಾಗಿ ಅನಂತ ಭಟ್ ಮಚ್ಚಿಮಲೆ 5 ನೇ ಬಾರಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜಯಂತ ಗೌಡ ಎಂ. ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಂಜೀವ ಗೌಡ, ಯಶೋಧರ ಗೌಡ, ಜಯಪ್ರಸಾದ್ ಗೌಡ, ರಾಮಣ್ಣ ಪೂಜಾರಿ, ಬೇಬಿ ಕೆ.ವಿ, ಚಿನ್ನಮ್ಮ,ಶೋಭಾ, ಚಂದ್ರಹಾಸ,ಬಾಲಕೃಷ್ಣ ಗೌಡ,ಈಶ್ವರ ಹಾಗೂ ಲೀಲಾವತಿ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ.
ಮಂಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಅಧೀಕ್ಷಕ ಬಿ.ನಾಗೇಂದ್ರ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

previous post