ಬೆಳ್ತಂಗಡಿ : ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ, ಬೆಳ್ತಂಗಡಿ ಇದರ, ಮಹಾಸಭೆಯು ಲಾಯಿಲ ಸಭಾಭವನದಲ್ಲಿ ನಡೆಯಿತು .
ಸಭಾದ ಅಧ್ಯಕ್ಷ ಪಿ.ರಾಧಾಕೃಷ್ಣ ರಾವ್ ರವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಮುಂದಿನ 2 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಶಿವಾನಂದ ರಾವ್ ಕಕ್ಕೆನೇಜಿ, ಕಾರ್ಯದರ್ಶಿಯಾಗಿ ವಿಕಾಸ್ ರಾವ್ ಉಜಿರೆ ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಪವನ್ ರಾವ್ ಚಾರ್ಮಾಡಿ, ಸೂರ್ಯಾನಂದ ರಾವ್ ಧರ್ಮಸ್ಥಳ , ಅನಿಲ್ ಮಡಂತ್ಯಾರು, ರತ್ನಾಕರ ರಾವ್ ನಾರಾವಿ , ಶ್ರೀಮತಿ ನಾಗರತ್ನ ಉಮೇಶ್ ರಾವ್ ಕೊಲ್ಲಿ ಪಾಲು ,ಜೊತೆಕಾರ್ಯದರ್ಶಿಯಾಗಿ ಕೃಷ್ಣ ಕುಮಾರ್ ಬೆಳ್ತಂಗಡಿ, ಕೋಶಾಧಿಕಾರಿಯಾಗಿ ಶ್ರೀಮತಿ ರೇಖಾ ಸುಧೀರ್ ಬೆಳ್ತಂಗಡಿ ಇವರುಗಳು ಆಯ್ಕೆಯಾದರು.
ಅರುಣ್ ಕುಮಾರ್, ಎಂ.ಎಸ್ ದಿಶಾ ಇವರು ಸಭಾ ನಡೆದು ಬಂದ ದಾರಿ, ಕಳೆದ 2ವರ್ಷದಲ್ಲಿ ಸಭಾದ ಮೂಲಕ ನಿರ್ವಹಿಸಲ್ಪಟ್ಟ ಅವಿಸ್ಮರಣೀಯ ಕಾರ್ಯಕ್ರಮಗಳ ಕುರಿತು ಪ್ರಸ್ತಾಪಿಸಿ ನಿರ್ಗಮನ ಸಮಿತಿಗೆ ಅಭಿನಂದನೆ ಸಲ್ಲಿಸಿದರು.
2 ವರ್ಷಗಳ ರಜತ ಸಂಭ್ರಮದಲ್ಲಿ ಸಹಕರಿಸಿದ ಎಲ್ಲರಿಗೂ ನಿರ್ಗಮನ ಅಧ್ಯಕ್ಷ ಪಿ. ರಾಧಾಕೃಷ್ಣ ರಾವ್ ಕೃತಜ್ಞತೆ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ 23 ವಿದ್ಯಾರ್ಥಿಗಳಿಗೆ ರೂ.2,30,000 ಮೊತ್ತದ ವಿದ್ಯಾರ್ಥಿ ಪ್ರೋತ್ಸಾಹ ನಿಧಿಯನ್ನು ವಿತರಿಸಲಾಯಿತು. ಇಬ್ಬರು ಸದಸ್ಯರಿಗೆ ರೂ. 20,000 ಮೊತ್ತದ ವೈದ್ಯಕೀಯ ನಿಧಿಯನ್ನು ನೀಡಲಾಯಿತು. ಈ ಎಲ್ಲಾ ಮೊತ್ತವನ್ನು ಸಮಾಜದ ಸದಸ್ಯರೇ ಪ್ರಾಯೋಜಿಸಿರುತ್ತಾರೆ. 2022-23ನೇ ಸಾಲಿನಲ್ಲಿ ಎಸ್.ಎಸ್.ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಶ್ರೀಮತಿ ಶುಭಾ ವಿಕಾಸ್ ರವರು ನಿರ್ವಹಿಸಿದ ಕಾರ್ಯಕ್ರಮದಲ್ಲಿ ಬಿ.ಕೆ ಧನಂಜಯ ರಾವ್ ನಿರ್ದೇಶಕರ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.