ಕೊಯ್ಯೂರು : ಕೊಯ್ಯೂರು ಗ್ರಾಮ ಪಂಚಾಯತದ 2023- 24 ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗನ್ನಾಥ ರವರ ಅಧ್ಯಕ್ಷತೆಯಲ್ಲಿ ಪಂಚಾದುರ್ಗ ಸಮುದಾಯ ಭವನದಲ್ಲಿ ಜೂ. 30ರಂದು ಜರಗಿತು.
ನೋಡಲ್ ಅಧಿಕಾರಿಯಾಗಿ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಮಂಜು ನಾಯ್ಕ್ ವಹಿಸಿದರು.
ಸಭೆಯಲ್ಲಿ ಕಂದಾಯ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು, ಅರಣ್ಯ ಇಲಾಖೆ, ಕೃಷಿ ಇಲಾಖೆ, ಪಂಚಾಯತ್ ರಾಜ್, ಮೆಸ್ಕಾಂ ಇಲಾಖೆ, ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸುಮಿತ್ರ, ಸದಸ್ಯರಾದ ಯಶವಂತಗೌಡ, ಹರೀಶ್, ಲೀಲಾವತಿ, ದಯಮಾನೀ, ಗಿರೀಶ್, ದಿವ್ಯ, ಶಾರದಾ, ಲೋಕೇಶ್, ಚಂದ್ರವತಿ. ವಿಶಾಲಾಕ್ಷಿ,ಹೇಮಾವತಿ, ಇಸುಬು, ಅಭಿವೃದ್ಧಿ ಅಧಿಕಾರಿ ಪ್ರಕಾಶ ಉಪಸ್ಥಿತರಿದ್ದರು.

previous post