ಬೆಳ್ತಂಗಡಿ: ಇಲ್ಲಿನ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೈದ್ಯರ ದಿನಾಚರಣೆಯನ್ನು ಇಂದು ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ENT ತಜ್ಞೆ ಡಾ. ತಾರಕೇಶ್ವರಿ ಮತ್ತು ಅಮ್ಮಿ ಸಿಸ್ಟರ್ ಇವರು ಆಗಮಿಸಿ, ವೈದ್ಯರ ಕರ್ತವ್ಯ ಮತ್ತು ಜೀವನದ ಬಗ್ಗೆ ತಿಳಿಸಿ, ಕಿವಿ ಮತ್ತು ಗಂಟಲಿನ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಎಂ ಆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ನಿಧಿ ಸ್ವಾಗತಿಸಿ, ಸನ್ನಿಧಿ ವಂದಿಸಿದರು.