ಬೆನಕ ಆಸ್ಪತ್ರೆಯಿಂದ ಡಾ| ಕೇಶವ ರವರಿಗೆ ಗೌರವಾರ್ಪಣೆ

Suddi Udaya

ಉಜಿರೆ: ದೇಶ ಕಂಡ ಅಪ್ರತಿಮ ವೈದ್ಯ ಡಾ| ಬಿ.ಸಿ.ರಾಯ್ ಅವರ ಸ್ಮರಣಾರ್ಥ ಪ್ರತೀ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ನಾಡಿನ ವೈದ್ಯರುಗಳನ್ನು ಮತ್ತು ಅವರು ಸಮಾಜಕ್ಕೆ ನೀಡುವ ಸೇವೆಯನ್ನು ಸ್ಮರಿಸಿ ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅದಕ್ಕೆ ಪೂರಕವಾಗಿ ಉಜಿರೆಯ ಪ್ರತಿಷ್ಠಿತ ಎನ್.ಎ.ಬಿ.ಹೆಚ್ ಪುರಸ್ಕೃತ ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಕೆಲವು ವರ್ಷಗಳಿಂದ ತಾಲೂಕಿನ ಹಿರಿಯ ವೈದ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದು, ಈ ವರ್ಷ ತಾಲೂಕಿನ ಹಿರಿಯ ಮತ್ತು ಪ್ರಸಿದ್ಧ ವೈದ್ಯರು, ಕಳೆದ 45 ಕ್ಕಿಂತಲೂ ಹೆಚ್ಚು ವರ್ಷಗಳಿಂದ ತಮ್ಮ ಸೇವೆಯ ಮೂಲಕ ಬೆಳ್ತಂಗಡಿ ತಾಲೂಕಿನ ಜನಮಾನಸದಲ್ಲಿರುವ ಡಾ| ಕೇಶವ ಎಮ್.ಬಿ.ಬಿ.ಎಸ್, ಡಿ.ಎ ( ಫಿಸಿಶಿಯನ್ ಮತ್ತು ಅರವಳಿಕೆ ತಜ್ಞರು) ರವರಿಗೆ ಅವರ ಗುರುವಾಯನಕೆರೆಯಲ್ಲಿರುವ ರಾಘವೇಂದ್ರ ಕ್ಲಿನಿಕ್ ಗೆ ತೆರಳಿ ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಗೋಪಾಲಕೃಷ್ಣ ಮತ್ತು ಡಾ| ಭಾರತಿ ದಂಪತಿಗಳು ಡಾ| ಕೇಶವ ಅವರಿಗೆ ಶಾಲು ಹೊದಿಸಿ ಫಲಪುಷ್ಪ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಆಸ್ಪತ್ರೆಯ ಪ್ರಧಾನ ವ್ಯವಸ್ಥಾಪಕ ದೇವಸ್ಯ ವರ್ಗೀಸ್ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ ಭಟ್ ಉಪಸ್ಥಿತರಿದ್ದರು.

Leave a Comment

error: Content is protected !!