ಉರುವಾಲು ಶ್ರೀ ಮಹಮ್ಮಾಯಿ ದೇವಸ್ಥಾನ , ಶ್ರೀ ಮಹಮ್ಮಾಯಿ ಕ್ಷೇತ್ರ ಸೇವಾ ಟ್ರಸ್ಟ್ ಶಿವಾಜಿನಗರ ಉರುವಾಲು ಪದವು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಟ್ರಸ್ಟ್ ಉರುವಾಲು ವಿಭಾಗ, ಬೆಳ್ತಂಗಡಿ ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿದ್ದೋದ್ದೇಶ ಸಹಕಾರ ಸಂಘ, ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಗಿಡ ನೆಡುವ ಹಾಗೂ ಸಸಿ ವಿತರಣಾ ಕಾರ್ಯಕ್ರಮ ಜೂ.30 ರಂದು ಶ್ರೀ ಮಹಮ್ಮಾಯಿ ದೇವಸ್ಥಾನ ಉರುವಾಲುಪದವು ಇಲ್ಲಿ ನೆರವೇರಿತು.
ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಗಾಯತ್ರಿ ಗೋಪಾಲ ಗೌಡ ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ ಮಾತನಾಡುತ್ತಾ ಮಹಮ್ಮಾಯಿ ದೇವಸ್ಥಾನದ ಆವರಣದ ಸುತ್ತ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ವಿವಿಧ ರೀತಿಯ ಹಣ್ಣಿನ ಮತ್ತು ಹೂವಿನ ಗಿಡಗಳನ್ನು ನೆಡುವುದರ ಮೂಲಕ ಪ್ರಕೃತಿಯ ರಕ್ಷಣೆಯಾಗಿದೆ. ನಾವು ಪ್ರಕೃತಿಯನ್ನು ನಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದರಿಂದ ಇಂದು ಹವಾಮಾನದ ಏರುಪೇರುಗಳು, ಕಂಡುಬರುತ್ತದೆ. ಇದರಿಂದಾಗಿ ಇಂದು ಮಳೆಗಾಲದಲ್ಲಿ ಸರಿಯಾಗಿ ಮಳೆಯಾಗುತ್ತಿಲ್ಲ. ಆದ್ದರಿಂದ ಗಿಡಗಳನ್ನು ನೆಡುವುದರ ಮೂಲಕ ಪಕೃತಿಯನ್ನು ರಕ್ಷಿಸುವಂತೆ ಕರೆ ನೀಡಿದರು, ಯೋಜನಾಧಿಕಾರಿ ದಯಾನಂದ ಪೂಜಾರಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಹಾಗೂ ಮಹಮ್ಮಾಯಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಲಿಂಗಪ್ಪ ನಾಯ್ಕ, ಉರುವಾಲು ಮಾತನಾಡುತ್ತಾ ಈ ಗಿಡಗಳನ್ನು ಪೋಷಿಸುವ ಕಾರ್ಯ ಪ್ರಮುಖವಾದದ್ದು, ಈ ಕಾರ್ಯವನ್ನು ಜೈ ಶಿವಾಜಿ ಗೆಳೆಯರ ಬಳಗದ ತಂಡ ನಿರ್ವಹಿಸುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಹಸ್ರ ಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸುನೀಲ್ ಗೌಡ ಅನಾವು, ಲ್ಯಾಂಪ್ಸ್ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಶ್ರೀಮತಿ ಜಯಂತಿ ಹಾಗೂ ಕೊರಿಂಜ ಪಂಚಲಿಂಗೇಶ್ವರ ದೇವಸ್ಥಾನದ ಸಹ ಮೊಕ್ತೇಸರರಾದ ಸೇಸಪ್ಪ ರೈ ಕೊರಿಂಜ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಪ್ರಗತಿಬಂಧು ಒಕ್ಕೂಟ ಕುಪ್ಪೆಟ್ಟಿ & ಉರುವಾಲು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜ, ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಲೇಜಿ, ಶ್ರೀ ವಿಶ್ವೇಶ್ವರ ಭಜನಾ ಮಂದಿರ ಕಾರಿಂಜ ಉರುವಾಲು, ಶ್ರೀ ಸತ್ಯನಾರಾಯಣ ಭಜನಾ ಮಂದಿರ ಉರುವಾಲು, ಶ್ರೀ ಗಣೇಶ್ ಭಜನಾ ಮಂದಿರ ಕುಪ್ಪೆಟ್ಟ, ಶ್ರೀ ಮಹಮ್ಮಾಯಿ ಮರಾಠಿ ಸಮಾಜ ಸೇವಾ ಸಂಘ ಉರುವಾಲು, ನಂದಗೋಕುಲ ಗೆಳೆಯರ ಬಳಗ ಗೋಕುಲಾ ನಗರ ಬನಾರಿ, ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಕೊರಿ೦ಜ, ಜೈ ಶಿವಾಜಿ ಗೆಳೆಯರ ಬಳಗ ಈ ಎಲ್ಲಾ ಸಂಘ-ಸಂಸ್ಥೆಗಳು ಸಹಕಾರಿಸಿ ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟಿನ ಪದಾಧಿಕಾರಿಗಳು, ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಕ್ಷೇತ್ರದ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದರು. ಸಂಪಿಗೆಯ ಮತ್ತು ಶ್ರೀ ಗಂಧದ ಗಿಡಗಳನ್ನು ವಿತರಿಸಲಾಯಿತು.
ಸೇವಾ ಪ್ರತಿನಿಧಿ ಸೀತಾರಾಮ ಆಳ್ವ ಕೊರಿಂಜ ಸ್ವಾಗತಿಸಿದರು. ಶ್ರೀ ಕ್ಷೇತ್ರ ಮೇಲ್ವಿಚಾರಕರಾದ ಶಿವಾನಂದ ಕಾರ್ಯಕ್ರಮವನ್ನು ನಿರೂಪಿಸಿದರು. ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಕೆ ಧನ್ಯವಾದವಿತ್ತರು.