25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತಾಲೂಕು ಜನಜಾಗೃತಿ ವೇದಿಕೆಯ ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ

ತಾಲೂಕು ಜನಜಾಗೃತಿ ವೇದಿಕೆಯ ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆಬೆಳ್ತಂಗಡಿ: ತಾಲೂಕು ಜನಜಾಗೃತಿ ವೇದಿಕೆಯ ಸಭೆಯು ಅಧ್ಯಕ್ಷೆ ಶಾರದಾ ಆರ್ ರೈ ಅವರ ಅಧ್ಯಕ್ಷತೆಯಲ್ಲಿ ಜು.3 ರಂದು ಪಣೆಜಾಲಿನ ಸಂಭ್ರಮ ಸಭಾಭವನದಲ್ಲಿ ಜರುಗಿತು.

ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್ ಕಾಪಿನಡ್ಕ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ, ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಶುಭಹಾರೈಸಿದರು. ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರುಗಳಾದ ಡಿ.ಎ ರಹಿಮಾನ್ ಮತ್ತು ತಿಮ್ಮಪ್ಪ ಗೌಡ ಬೆಳಾಲು, ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ಬಂಗೇರ ಉಪಸ್ಥಿತರಿದ್ದರು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಿಸ್ ಅವರು ಕ್ರಿಯಾಯೋಜನೆ ಮಂಡಿಸಿ, ಉದ್ದೇಶಿತ ಕಾರ್ಯಯೋಜನೆಗಳನ್ನು ವಿವರಿಸಿದರು. ವಿವಿಧ ವಲಯಗಳ ಮೇಲ್ವಿಚಾರಕರಾದ ಶಿವಾನಂದ ಕಣಿಯೂರು, ಶಾಲಿನಿ ವೇಣೂರು, ಸುಮಂಗಲ ಅಳದಂಗಡಿ, ಉಷಾ ಇಂದಬೆಟ್ಟು, ಹೇಮಾವತಿ ಪಡಂಗಡಿ, ಭಾಗೀರಥಿ ಕೊಕ್ಕಡ, ಧಮಯಂತಿ ನಾರಾವಿ,ವಿದ್ಯಾ ತಣ್ಣೀರುಪಂತ, ವಸಂತ ಕುಮಾರ್ ಮಡಂತ್ಯಾರು, ಅಚ್ಚುತ ಗುರುವಾಯನಕೆರೆ, ಪ್ರಶಾಂತ ಧರ್ಮಸ್ಥಳ, ಶಶಿಕಲಾ ಲಾಯಿಲ, ಗಣೇಶ್ ಕುಮಾರ್ ಗುರುವಾಯನಕೆರೆ, ವೇದಾ ಹೊಸಂಗಡಿ, ವನಿತಾ ಉಜಿರೆ, ರಾಜೇಶ್ ನೆರಿಯ ಮತ್ತುಜನಾರ್ದನ ಮುಂಡಾಜೆ ಭಾಗಿಯಾಗಿದ್ದರು. ಎಲ್ಲಾ ವಲಯಾಧ್ಯಕ್ಷರು ಹಾಗೂ ಸದಸ್ಯರುಗಳನ್ನು ಗೌರವಿಸಲಾಯಿತು. ನಿಕಟಪೂರ್ವ ಅಧ್ಯಕ್ಷೆ ಶಾರದಾ ಆರ್. ರೈ ಅವರನ್ನು ಅಭಿನಂದಿಸಲಾಯಿತು. ನೂತನ ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ ಮಾತನಾಡಿ ಎಲ್ಲರ ಸಹಕಾರ ಕೋರಿದರು. ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಕಾರ್ಯಕ್ರಮದ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಗುರುವಾಯನಕೆರೆ ವಿಭಾಗದ ಯೋಜನಾಧಿಕಾರಿ ದಯಾನಂದ ವಂದಿಸಿದರು. ಬೆಳ್ತಂಗಡಿ ಯೋಜನಾಧಿಕಾರಿ ಸುರೇಂದ್ರ ವರದಿ ಮಂಡಿಸಿದರು.

ವೇದಿಕೆಯ ಗೌರವಾಧ್ಯಕ್ಷರ ಮೇಲೆ ಅಪಪ್ರಚಾರದ ಬಗ್ಗೆ ಖಂಡನೆ: ಜನಜಾಗೃತಿ ವೇದಿಕೆಯ ಗೌರವಾಧ್ಯಕ್ಷರಾಗಿರುವ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರ ಅಪಪ್ರಚಾರ ಮತ್ತು ತಪ್ಪು ಸಂದೇಶ ರವಾನೆ ಮಾಡುತ್ತಿರುವ ಕೆಲವು ಶಕ್ತಿಗಳ ಬಗ್ಗೆ ವೇದಿಕೆ ವತಿಯಿಂದ ಖಂಡಿಸಲಾಯಿತು. ಕಾನೂನಾತ್ಮಕ ಕ್ರಮಗಳ ಬಗ್ಗೆ ಹೆಜ್ಜೆ ಇಡುವ ಬಗ್ಗೆ ಚರ್ಚಿಸಲಾಯಿತು.

ನೂತನ ಅಧ್ಯಕ್ಷರಾಗಿ ಕಾಸಿಂ ಮಲ್ಲಿಗೆಮನೆ ಅವಿರೋಧ ಆಯ್ಕೆ ಈ ಸಂದರ್ಭದಲ್ಲಿ ಮುಂದಿನ 2 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಎಂ.ಎ ಕಾಸಿಂ ಮಲ್ಲಿಗೆಮನೆ, ಕಾರ್ಯದರ್ಶಿಯಾಗಿ ಗ್ರಾ.ಯೋ. ಬೆಳ್ತಂಗಡಿ ಯೋಜನಾಧಿಕಾರಿ ಸುರೇಂದ್ರ ಮತ್ತು ಕೋಶಾಧಿಕಾರಿಯಾಗಿ ಗಿರೀಶ್ ವೇಣೂರು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Related posts

ಗಣೇಶ ಚತುರ್ಥಿಯ ರಜೆಯನ್ನು ಬದಲಾಯಿಸುವಂತೆ ಮನವಿ

Suddi Udaya

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ವಾಣಿ ಕಾಲೇಜಿನ ವಿದ್ಯಾರ್ಥಿಗಳು ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆ

Suddi Udaya

ಕಲ್ಮಂಜ ಗ್ರಾಮದ ಮಿಯ ನಿವಾಸಿ ಉಜಿರೆ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಮನೆಯಿಂದ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ: ರೂ.8.42 ಲಕ್ಷ ನಗದು ಸಹಿತ ಚಿನ್ನಾಭರಣ ವಶ: ನಾಲ್ಕು ವರ್ಷಗಳ ಹಿಂದೆ ಮನೆಯವರನ್ನು ಕಟ್ಟಿ ಹಾಕಿ ನಡೆದ ದರೋಡೆ

Suddi Udaya

ಪುತ್ತಿಲ ಕುಂಡಡ್ಕ : ಮನೆಯ ದಾರಂದ ಬಿದ್ದು ಶಾಲಾ ಬಾಲಕಿ ಅಲ್ಫಿಯಾ ಮೃತ್ಯು

Suddi Udaya

ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ: ಉರುವಾಲು ಶ್ರೀ ಭಾರತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಕು| ಮಾನ್ವಿ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ ಶ್ರೀವಿಶ್ವಕರ್ಮಾಭ್ಯುದಯ ಸಭಾದಿಂದ ಶ್ರೀವಿಶ್ವಕರ್ಮಯಜ್ಞ ಮತ್ತು ಪೂಜೆ

Suddi Udaya
error: Content is protected !!