ಲಾಯಿಲ : ಬಂಟರ ಗ್ರಾಮ ಸಮಿತಿ ಲಾಯಿಲ ಇದರ ಮಾಸಿಕ ಸಭೆಯು ಗ್ರಾಮ ಸಮಿತಿಯ ಅಧ್ಯಕ್ಷ ಜನಾರ್ದನ ಶೆಟ್ಟಿ ಪೆರ್ನಾದಿಲೆ ಯವರ ಅಧ್ಯಕ್ಷತೆಯಲ್ಲಿ ಸಮಿತಿ ಸದಸ್ಯರಾದ ಅಶೋಕ್ ಶೆಟ್ಟಿ “ಗುರುಕಿರಣ” ನಿವಾಸ ರಾಘವೇಂದ್ರ ನಗರ ಲಾಯಿಲ ಇವರ ಮನೆಯಲ್ಲಿ ಜು.02 ರಂದು ನಡೆಯಿತು.
ಸಭೆಯಲ್ಲಿ ಗ್ರಾಮಸಮಿತಿಯ ಪದಾಧಿಕಾರಿಗಳು, ಸಮಾಜಬಾಂಧವರು ಉಪಸ್ಥಿತರಿದ್ದರು. ಸಭೆಯಲ್ಲಿ ಪಿಯುಸಿ ಯಲ್ಲಿ ಗರಿಷ್ಟ ಅಂಕ ಪಡೆದ ಕೌಶಿಕ್ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು.











