24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಅರಸಿನಮಕ್ಕಿ : ಸೈನಿಕ ಕೆ. ಮಹಾಬಲ ಮುದ್ದಿಗೆಯವರಿಗೆ ನಾಗರಿಕರಿಂದ ಅಭಿನಂದನೆ

ಅರಸಿನಮಕ್ಕಿ : ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡು ಭಾರತೀಯ ಸೈನ್ಯದಲ್ಲಿ 40 ವರ್ಷಗಳ ಸೇವೆ ಸಲ್ಲಿಸಿ ಸುಬೇದಾರ್ ಹುದ್ದೆಯವರೆಗೆ ಭಡ್ತಿಗೊಂಡು ಜೂ.30ರಂದು ಸೇವಾ ನಿವೃತ್ತಿ ಹೊಂದಿ ಜು.5ರಂದು ಹುಟ್ಟೂರಿಗೆ ಆಗಮಿಸಿದ ಹತ್ಯಡ್ಕ ಗ್ರಾಮದ ಸೈನಿಕ ಕೆ. ಮಹಾಬಲ ಮುದ್ದಿಗೆಯವರಿಗೆ ನಾಗರಿಕರಿಂದ ಕೊಕ್ಕಡ ಜಂಕ್ಷನ್ ನಿಂದ ಮುದ್ದಿಗೆ ಪೇಟೆವರೆಗೆ ವಾಹನದೊಂದಿಗೆ ಮೆರವಣಿಗೆ ಜರುಗಿತು.

ನಂತರ ನಡೆದ ಅಭಿನಂದನಾ ಸಭೆಯಲ್ಲಿ ಮಾಜಿ ಸೈನಿಕರಾದ ಮೋಹನ್ ಶೆಟ್ಟಿ, ಚೆರಿಯನ್, ಜಯಚಂದ್ರ, ಕೊಕ್ಕಡ ಗ್ರಾ. ಪಂ. ಅಧ್ಯಕ್ಷ ಯೋಗೀಶ್ ಆಲಂಬಿಲ, ಕಳೆಂಜ ಗ್ರಾ. ಪಂ. ಅಧ್ಯಕ್ಷ ಪ್ರಸನ್ನ ಎ. ಪಿ., ಅರಸಿನಮಕ್ಕಿ ಗ್ರಾ. ಪಂ. ಸದಸ್ಯ ಸುಧೀರ್ ಕುಮಾರ್, ಉದ್ಯಮಿ ರಹೀಮ್ ಮುದ್ದಿಗೆ ಮಾತನಾಡಿದರು.

ರಾಜರಾಮ ಟಿ. ಮುದ್ದಿಗೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಹತ್ಯಡ್ಕ , ಕೊಕ್ಕಡ, ಕಳೆಂಜದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Related posts

ಸುದ್ದಿ ಉದಯ ಪತ್ರಿಕೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಖ್ಯಾತ ಚಿತ್ರನಟ ರಮೇಶ್ ಅರವಿಂದ

Suddi Udaya

ಎ.16-21: ಬೆಳ್ತಂಗಡಿ ಮಹಿಳಾ ವೃಂದದ ಆಶ್ರಯದಲ್ಲಿ ಝೇಂಕಾರ ಬೇಸಿಗೆ ಶಿಬಿರ

Suddi Udaya

ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ಧನ ಸಂಗ್ರಹ, ಹಸ್ತಾಂತರ

Suddi Udaya

ನ.18: ಧರ್ಮಸ್ಥಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳನ್ನು ಮೆಚ್ಚಿ ಉಜಿರೆಯಲ್ಲಿ 3 ಹೊಸ ಸಂಘ ರಚನೆ

Suddi Udaya

ಮದ್ದಡ್ಕ ಕುದ್ರೆಕಲಗಲ್ಲು ನಿವಾಸಿ ಶ್ರೀಮತಿ ನಿಧನ

Suddi Udaya
error: Content is protected !!