25.7 C
ಪುತ್ತೂರು, ಬೆಳ್ತಂಗಡಿ
September 20, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿರ್ಲಾಲು ಗ್ರಾಮ ಸಭೆ: ಶಿರ್ಲಾಲುವಿನಲ್ಲಿರುವ ಗೋಮಾಲಾ ಜಾಗವನ್ನು ಕಂದಾಯ ಇಲಾಖೆ ತನ್ನ ಸುಪರ್ಧಿಗೆ ಪಡೆಯಬೇಕೆಂದು ಗ್ರಾಮಸ್ಥರ ಒತ್ತಾಯ

ಶಿರ್ಲಾಲು :ಶಿರ್ಲಾಲು ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ಪ್ರಥಮ‌ ಸುತ್ತಿನ ಗ್ರಾಮ ಸಭೆಯು ಗ್ರಾ.ಪಂ ಅಧ್ಯಕ್ಷ ತಾರಾನಾಥ ಗೌಡ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ವಿದ್ಯಾ ಅವರು ಮಾರ್ಗದರ್ಶಿ ಅಧಿಕಾರಿಯಾಗಿ ಸಭೆಯನ್ನು ಮುನ್ನಡೆಸಿದರು.

ಶಿರ್ಲಾಲುವಿನಲ್ಲಿರುವ ಗೋಮಾಲಾ ಜಾಗವನ್ನು ಕಂದಾಯ ಇಲಾಖೆ ತನ್ನ ಸುಪರ್ದಿಗೆ ಪಡೆಯಬೇಕೆಂದು ಗ್ರಾಮಸ್ಥರ ಒತ್ತಾಯ ಮಾಡಿದರು.
ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಹಲವಾರು ಚರ್ಚೆಗಳು ನಡೆದವು .ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಪಂಚಾಯತ್ ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಜ್ಯೋತಿ ಪೂಜಾರಿ, ಮಾಧವ, ಮಮತಾ ಜೈನ್, ಸೋಮನಾಥ ಬಂಗೇರ,ಗೀತಾ, ಕೊರಗಪ್ಪ,ಸುಶೀಲ, ಪ್ರಕಾಶ್ ಹೆಗ್ಡೆ,ಉಷಾ ಎಂ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜು ಸ್ವಾಗತಿಸಿದರು. ಕಾರ್ಯದರ್ಶಿ ಮೋನಮ್ಮ ಅನುಪಾಲನಾ ವರದಿ ಸಭೆಯ ಮುಂದಿಟ್ಟರು. ಪಂಚಾಯತ್ ನ ಪವಿತಾ, ಸರೋಜಿನಿ, ಸುಪ್ರಿಯಾ, ಹರೀಶ್, ದಿನೇಶ, ವಿಶ್ವನಾಥ ಸಹಕರಿಸಿದರು. ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ನಾವೂರು: ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಭೇಟಿ

Suddi Udaya

ಲಾಯಿಲ ಸೈಂಟ್ ಮೇರಿಸ್ ಶಾಲಾ ಬೆಳ್ಳಿಹಬ್ಬ ಸಂಭ್ರಮಕ್ಕೆ ಚಾಲನೆ, ಲೋಗೋ ಬಿಡುಗಡೆ

Suddi Udaya

ಕಾಜೂರು‌ ಉರೂಸ್ ಸಮಾರೋಪ

Suddi Udaya

ತೋಟತ್ತಾಡಿ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ಯುವ ಬಿಲ್ಲವ ವೇದಿಕೆಯ ನೂತನ ಸಮಿತಿ ರಚನೆ

Suddi Udaya

ವಿಶ್ವಹಿಂದೂ ಪರಿಷತ್ ಭಜರಂಗದಳ ವೇಣೂರು ಪ್ರಖಂಡದಿಂದ ವೇಣೂರು ಪೋಲೀಸ್ ಠಾಣೆಗೆ ದೂರು

Suddi Udaya

ಮಚ್ಚಿನ: ಬಳ್ಳಮಂಜ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಚಿಕಿತ್ಸಾ ನೆರವು

Suddi Udaya
error: Content is protected !!