ಗುರುವಾಯನಕೆರೆ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಗುರುವಾಯನಕೆರೆಯ ಪ್ಪೋರಿನಾ ಡಿ ಕುನ್ಹ ಅವರ ಮನೆಗೆ ಹಾಗೂ ಬೇಕರಿ, ಅಂಗಡಿ, ಪ್ಯಾನ್ಸಿಗೆ ನೀರು ನುಗ್ಗಿ ಸಮಸ್ಯೆಯಾದ ಘಟನೆ ವರದಿಯಾಗಿದ್ದು ಕೂಡಲೇ ಕುವೆಟ್ಟು ಗ್ರಾ.ಪಂ ಅಗತ್ಯ ಕ್ರಮ ಜರುಗಿಸಿದೆ.
ಮನೆಯ ಹಾಗೂ ಅಂಗಡಿಗಳ ಪಕ್ಕ ಮೋರಿ ಒಡೆದು ಹೋಗಿ, ಒಳಚರಂಡಿಯಲ್ಲಿ ಮಣ್ಣು, ಪ್ಲಾಸ್ಟಿಕ್ ತುಂಬಿಕೊಂಡಿತ್ತು. ಜೆಸಿಬಿ ಹಾಗೂ ಪಂಚಾಯತ್ ಸದಸ್ಯರ ಕೂಡುವಿಕೆಯೊಂದಿಗೆ ಚರಂಡಿ ಸರಿಪಡಿಸಿ, ಮೋರಿ ಅಳವಡಿಸಿ ನೀರು ಸರಗವಾಗಿ ಹರಿಯುವಂತೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕುವೆಟ್ಟು ಗ್ರಾ.ಪಂ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಸದಸ್ಯರಾದ ಗಣೇಶ್ ಕುಲಾಲ್, ಮುಸ್ತಾಫ ಹಾಗೂ ಸ್ಥಳಿಯರು ಉಪಸ್ಥಿತರಿದ್ದು ಕೆಲಸಕ್ಕೆ ಸೇರಿದರು.