24.8 C
ಪುತ್ತೂರು, ಬೆಳ್ತಂಗಡಿ
April 10, 2025
ಧಾರ್ಮಿಕ

ಜೈನ ಮುನಿಯ ವಿಚಾರದಲ್ಲ ರಾಜಕಾರಣಿಗಳ ಬುದ್ಧಿಜೀವಿಗಳ ಪ್ರಗತಿಪರರ ಜಾತ್ಯಾತೀತರ ತಾರತಮ್ಯ

ಬೆಳ್ತಂಗಡಿ: ಬೆಳಗಾವಿಯ ಚಿಕ್ಕೋಡಿಯಲ್ಲಿ ಮುನಿಯೊಬ್ಬರ ಬರ್ಬರ ಹತ್ಯೆ ಮಾಡಲಾಗಿದೆ. ಇದರಿಂದ ಜೈನ ಸಮಾಜ ಆಘಾತಕ್ಕೆ ಒಳಗಾಗಿದೆ. ಮೈಕ್ರೋ ಸಂಖ್ಯೆಯಲ್ಲಿರುವ ಜೈನರಿಗೆ ಭಾರತದಲ್ಲಿಯೇ ಅದೂ ಮೂಲನಿವಾಸಿಗಳಾದ ಜೈನರಿಗೆ ಭಾರತದಲ್ಲಿಯೇ ಅಭದ್ರತೆಯ ವಾತಾವರಣ ಉಂಟಾಗಿರುವುದು ವಿಷಾದನೀಯ.
‌ಜೈನ ಮುನಿಯೊಬ್ಬರ ಕ್ಷುಲ್ಲಕ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ.‌ ಸಹಾಯ ಪಡೆದುಕೊಂಡವರೇ ಕೃತಘ್ನರಾಗಿ ಹತ್ಯೆಗೈದಿದ್ದಾರೆ. ಆದರೆ ರಾಜಕಾರಣಿಗಳು, ರಾಜಕೀಯ ಪಕ್ಷಗಳು, ಬುದ್ಧಿ ಜೀವಿಗಳು, ಪ್ರಗತಿಪರರು, ಜಾತ್ಯಾತೀತರು ದಿವ್ಯ ಮೌನವಹಿಸಿದ್ದಾರೆ. ಬೆರಳಣಿಕೆಯ ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ಘಟನೆ ಬೇರೆ ಧರ್ಮದ್ದಾಗಿದ್ದರೆ ಇಡೀ ರಾಜ್ಯದಲ್ಲೇ ದಂಗೆಯಾಗುತ್ತಿತ್ತು. ಆದರೆ ಜೈನರು ಅಹಿಂಸಾವಾದಿಗಳು ಹಾಗೂ ಯಾವುದೇ ರಾಜಕೀಯ ಬೆಂಬಲ ಇಲ್ಲದವರು. ಬೇರೆಯವರ ಒಂದು ಕೂದಲು ಅಲುಗಾಡಿದರು ಹಾರಾಡುವ ಚೀರಾಡುವ ಮಂದಿಗಳು ಎಲ್ಲಿ ಹೋದರು ..? ಹಣದಾಸೆಗೆ , ಸ್ವಹಿತಾಸಕ್ತಿಗಾಗಿ ಬೊಬ್ಬಿರಿಯುವ ಈ ಪಡೆಗಳು ಈಗ ನಾಲಿಗೆ ಬಿದ್ದವರಂತೆ ಬಿದ್ದುಕೊಂಡಿದ್ದಾರೆ. ಸಣ್ಣಸಣ್ಣ ಕಾರಣಗಳಿಗೂ ರಾಜಾರೋಷವಾಗಿ ಬೊಬ್ಬಿಡುವ ಮಂದಿಗಳು ಈಗ ಯಾವ ರೀತಿ ಲಾಭ ಪಡೆದುಕೊಳ್ಳಬಹುದು ಎಂದು ಕನಸು ಕಾಣುತ್ತಿವೆ.

ಈಗ ಜೈನರಿಗೆ ಭದ್ರತೆ, ರಕ್ಷಣೆ ಒದಗಿಸುವ ಜೊತೆಗೆ, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳೆರಡು ಜೈನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕಾದದ್ದು ಕರ್ತವ್ಯ. ನಿಮ್ಮಗಳ ಓಟುಬ್ಯಾಂಕನ್ನು ಬದಿಗಿರಿಸಿ ಸಾಮಾಜಿಕ ನ್ಯಾಯವನ್ನು ಜೈನರಿಗೆ ನೀಡಬೇಕಾದದ್ದು ನಿಮ್ಮಗಳ ಕರ್ತವ್ಯವಾಗಿದೆ. ಕೊಲೆಪಾತಕರಲ್ಲೂ ಜಾತಿಯನ್ನು ನೋಡದೇ ಕಾನೂನು ಪ್ರಕಾರ ಶಿಕ್ಷೆಯನ್ನು ಕೊಡಿ. ಜೈನರಿಗೆ ರಕ್ಷಣೆಯನ್ನು ನೀಡಿ. ನಿಷ್ಪಕ್ಷಪಾತವಾಗಿ ಜೈನರಿಗೆ ನ್ಯಾಯವನ್ನು ದೊರಕಿಸಿಕೊಡಿ.

  • ನಿರಂಜನ್ ಜೈನ್ ಕುದ್ಯಾಡಿ

Related posts

ಡಿ.17: ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ‘ಕೋರಿ ಜಾತ್ರೆ’

Suddi Udaya

ಲಾಯಿಲ: ಕುಂಟಿನಿ ಅಲ್ ಬುಖಾರಿ ಜುಮ್ಮಾ ಮಸೀದಿಯಲ್ಲಿ ಈದುಲ್ – ಹದಾ ಆಚರಣೆ

Suddi Udaya

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಶ್ರೀ ಕೃಷ್ಣ ಭಜನಾ ಮಂಡಳಿ (ರಿ) ಆದೂರು ಪೇರಲ್ ಕೊಯ್ಯೂರು ಹಾಗೂ ಊರವರ ಸಂಯುಕ್ತ ಆಶ್ರಯದಲ್ಲಿ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya

ಡಿ.8-12: ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ

Suddi Udaya

ಮಾ.30-ಎ.5: ಮಿತ್ತಬಾಗಿಲು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ದುರ್ಗಾದೇವಿ) ದೇವಸ್ಥಾನದ ವರ್ಷಾವಧಿ ಜಾತ್ರೆ

Suddi Udaya

ಧರ್ಮಸ್ಥಳದಲ್ಲಿ ವಿಜಯದಶಮಿ ಪ್ರಯುಕ್ತ ತೆನೆಹಬ್ಬ ಆಚರಣೆ

Suddi Udaya
error: Content is protected !!