ಬೆಳ್ತಂಗಡಿ: ಬೆಳಗಾವಿಯ ಚಿಕ್ಕೋಡಿಯಲ್ಲಿ ಮುನಿಯೊಬ್ಬರ ಬರ್ಬರ ಹತ್ಯೆ ಮಾಡಲಾಗಿದೆ. ಇದರಿಂದ ಜೈನ ಸಮಾಜ ಆಘಾತಕ್ಕೆ ಒಳಗಾಗಿದೆ. ಮೈಕ್ರೋ ಸಂಖ್ಯೆಯಲ್ಲಿರುವ ಜೈನರಿಗೆ ಭಾರತದಲ್ಲಿಯೇ ಅದೂ ಮೂಲನಿವಾಸಿಗಳಾದ ಜೈನರಿಗೆ ಭಾರತದಲ್ಲಿಯೇ ಅಭದ್ರತೆಯ ವಾತಾವರಣ ಉಂಟಾಗಿರುವುದು ವಿಷಾದನೀಯ.
ಜೈನ ಮುನಿಯೊಬ್ಬರ ಕ್ಷುಲ್ಲಕ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ. ಸಹಾಯ ಪಡೆದುಕೊಂಡವರೇ ಕೃತಘ್ನರಾಗಿ ಹತ್ಯೆಗೈದಿದ್ದಾರೆ. ಆದರೆ ರಾಜಕಾರಣಿಗಳು, ರಾಜಕೀಯ ಪಕ್ಷಗಳು, ಬುದ್ಧಿ ಜೀವಿಗಳು, ಪ್ರಗತಿಪರರು, ಜಾತ್ಯಾತೀತರು ದಿವ್ಯ ಮೌನವಹಿಸಿದ್ದಾರೆ. ಬೆರಳಣಿಕೆಯ ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ಘಟನೆ ಬೇರೆ ಧರ್ಮದ್ದಾಗಿದ್ದರೆ ಇಡೀ ರಾಜ್ಯದಲ್ಲೇ ದಂಗೆಯಾಗುತ್ತಿತ್ತು. ಆದರೆ ಜೈನರು ಅಹಿಂಸಾವಾದಿಗಳು ಹಾಗೂ ಯಾವುದೇ ರಾಜಕೀಯ ಬೆಂಬಲ ಇಲ್ಲದವರು. ಬೇರೆಯವರ ಒಂದು ಕೂದಲು ಅಲುಗಾಡಿದರು ಹಾರಾಡುವ ಚೀರಾಡುವ ಮಂದಿಗಳು ಎಲ್ಲಿ ಹೋದರು ..? ಹಣದಾಸೆಗೆ , ಸ್ವಹಿತಾಸಕ್ತಿಗಾಗಿ ಬೊಬ್ಬಿರಿಯುವ ಈ ಪಡೆಗಳು ಈಗ ನಾಲಿಗೆ ಬಿದ್ದವರಂತೆ ಬಿದ್ದುಕೊಂಡಿದ್ದಾರೆ. ಸಣ್ಣಸಣ್ಣ ಕಾರಣಗಳಿಗೂ ರಾಜಾರೋಷವಾಗಿ ಬೊಬ್ಬಿಡುವ ಮಂದಿಗಳು ಈಗ ಯಾವ ರೀತಿ ಲಾಭ ಪಡೆದುಕೊಳ್ಳಬಹುದು ಎಂದು ಕನಸು ಕಾಣುತ್ತಿವೆ.
ಈಗ ಜೈನರಿಗೆ ಭದ್ರತೆ, ರಕ್ಷಣೆ ಒದಗಿಸುವ ಜೊತೆಗೆ, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳೆರಡು ಜೈನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕಾದದ್ದು ಕರ್ತವ್ಯ. ನಿಮ್ಮಗಳ ಓಟುಬ್ಯಾಂಕನ್ನು ಬದಿಗಿರಿಸಿ ಸಾಮಾಜಿಕ ನ್ಯಾಯವನ್ನು ಜೈನರಿಗೆ ನೀಡಬೇಕಾದದ್ದು ನಿಮ್ಮಗಳ ಕರ್ತವ್ಯವಾಗಿದೆ. ಕೊಲೆಪಾತಕರಲ್ಲೂ ಜಾತಿಯನ್ನು ನೋಡದೇ ಕಾನೂನು ಪ್ರಕಾರ ಶಿಕ್ಷೆಯನ್ನು ಕೊಡಿ. ಜೈನರಿಗೆ ರಕ್ಷಣೆಯನ್ನು ನೀಡಿ. ನಿಷ್ಪಕ್ಷಪಾತವಾಗಿ ಜೈನರಿಗೆ ನ್ಯಾಯವನ್ನು ದೊರಕಿಸಿಕೊಡಿ.
- ನಿರಂಜನ್ ಜೈನ್ ಕುದ್ಯಾಡಿ