ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸುಲ್ಕೇರಿ: ಶ್ರೀ ನೇಮಿನಾಥ ಸ್ವಾಮಿ ಬಸದಿಯ ನೂತನ ಗೋಪುರದ ಶಿಲಾನ್ಯಾಸ

ಸುಲ್ಕೇರಿ : ಶ್ರೀ ನೇಮಿನಾಥ ಸ್ವಾಮಿ ಬಸದಿ ಜೀರ್ಣೋದ್ಧಾರಗೊಳ್ಳುತ್ತಿದ್ದು ಬಸದಿಯ ನೂತನ ಗೋಪುರದ ಶಿಲಾನ್ಯಾಸ ಸಮಾರಂಭ ಜು. 9 ರಂದು ಸುಲ್ಕೇರಿ ಬಸದಿಯಲ್ಲಿ ನಡೆಯಿತು.


ಪುರೋಹಿತರ ಧಾರ್ಮಿಕ ಪೂಜೆಗಳೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು, ಮೂಡಬಿದ್ರೆ ಎಕ್ಸ್ ಲೆಂಟ್ ಶಿಕ್ಷಣ ಸಂಸ್ಥೆಯ ಯುವರಾಜ ಜೈನ್, ನೂರಾಳ್ ಬೆಟ್ಟು ಜಯಧವಳದ ವಿಜಯ ಕುಮಾರ್ ಜೈನ್, ಮನ್ಮಥ ಕುಮಾರ್ ನೆಲ್ಲಿಕಾರು, ಸತೀಶ್ ಪಡಿವಾಳ್ ಪುತ್ತೂರು ಭಾಗವಹಿಸಿ ಬಸದಿಯ ಕೆಲಸ ಕಾರ್ಯಗಳಿಗೆ ಸಹಾಯ ಮಾಡುವುದರೊಂದಿಗೆ ಶುಭ ಕೋರಿದರು.


ಈ ಸಂದರ್ಭದಲ್ಲಿ ಗಣ್ಯರನ್ನು ಬಸದಿಯ ವತಿಯಿಂದ ಗೌರವಿಸಲಾಯಿತು.
ಆಡಳಿತ ಸಮಿತಿಯ‌ ಮೊಕ್ತೇಸರರಾದ ಎನ್.ರವಿರಾಜ ಹೆಗ್ಡೆ ನಾವರ ಗುತ್ತು ಮತ್ತು ಸಮಸ್ತ ಜೈನ ಭಾಂಧವರು ಭಾಗವಹಿಸಿದ್ದರು.

Related posts

ಯುವ ಕಾಂಗ್ರೆಸ್ ದಕ ಜಿಲ್ಲಾ ಸಮಿತಿಯಿಂದ ಮತಗಳ್ಳತನ ವಿರುದ್ದ ಜನಜಾಗೃತಿ ಹೋರಾಟಕ್ಕೆ ಬೆಂಬಲವಾಗಿ ಮಂಗಳೂರಿನಲ್ಲಿ ಬ್ರಹತ್ ಪಂಜಿನ ಮೆರವಣಿಗೆ

Suddi Udaya

ಮುಂಡೂರು: ಮುಂಗುಡಮೆಯ ಸೀತಾರಾಮ ಆಚಾರ್ಯ ಮನೆಯ ಬಳಿ ಗುಡ್ಡ ಕುಸಿತ

Suddi Udaya

ಸವಣಾಲು ನೇತಾಜಿ ಸುಭಾಷ್ ಚಂದ್ರ ಬೋಸ್ ಸ.ಪ್ರೌ. ಶಾಲೆಯ ವಿದ್ಯಾರ್ಥಿನಿ ಕು| ಅಪೇಕ್ಷಾ ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ವಿದ್ಯಾರ್ಥಿವೇತನಕ್ಕೆ ಆಯ್ಕೆ

Suddi Udaya

ಮುಂಡಾಜೆ ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ನಲ್ಲಿ ಈದುಲ್ ಫಿತರ್ ಸಂಭ್ರಮ: ಪ್ರತಿಭಾನ್ವಿತ ವಿದ್ಯಾರ್ಥಿ ಸಿಮಾಕ್ ತಂಙಳ್ ರಿಗೆ ಸನ್ಮಾನ

Suddi Udaya

ಶಿಶಿಲ ಜನಸ್ಪಂದನ ಸಭೆ: ಶಿಶಿಲ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾದ ಬಗ್ಗೆ ಅಧಿಕೃತ ಆದೇಶ ಬಂದಿಲ್ಲ – ಶಾಸಕ ಹರೀಶ್ ಪೂಂಜ

Suddi Udaya

ತೋಟತ್ತಾಡಿ ಶ್ರೀ ಉಳ್ಳಾಳ್ತಿ ಭಜನಾ ಮಂದಿರದಲ್ಲಿ 9ನೇ ವರ್ಷದ ನವರಾತ್ರಿ ಪ್ರಯುಕ್ತ ಭಜನಾ ಕಾರ್ಯಕ್ರಮ

Suddi Udaya
error: Content is protected !!