28.6 C
ಪುತ್ತೂರು, ಬೆಳ್ತಂಗಡಿ
September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜು

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುರಕ್ಷಿತ ಹಾಗೂ ಅಸುರಕ್ಷಿತ ಸ್ಪರ್ಶದ ಕುರಿತು ಮಾಹಿತಿ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯಲ್ಲಿ ಶಾಲಾ ಸುರಕ್ಷಾ ಸಮಿತಿಯ ವತಿಯಿಂದ ವಿದ್ಯಾರ್ಥಿನಿಯರಿಗೆ ಸುರಕ್ಷಿತ ಹಾಗೂ ಅಸುರಕ್ಷಿತ ಸ್ಪರ್ಶ ಕುರಿತು ಅರಿವು ಮೂಡಿಸುವ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಶಾಲಾ ಕೌನ್ಸಿಲರ್ ಶಾಮಿಲಾ ಅವರು ವಿದ್ಯಾರ್ಥಿನಿಯರಿಗೆ ಸುರಕ್ಷಿತ ಸ್ಪರ್ಶ ಮತ್ತು ಅಸುರಕ್ಷಿತ ಸ್ಪರ್ಶದ ಕುರಿತು, ವೈಯಕ್ತಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ವಿಧಾನಗಳು ಹಾಗೂ ಯಾವುದೇ ಅಹಿತಕರ ಸಂದರ್ಭ ಎದುರಾದಾಗ ವಿಶ್ವಾಸಾರ್ಹ ಹಿರಿಯರೊಂದಿಗೆ ಹಂಚಿಕೊಳ್ಳುವ ಅಗತ್ಯದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ. ಆರ್. ಅವರು ಮಾರ್ಗದರ್ಶನ ನೀಡಿದರು. ಶಾಲಾ ಸುರಕ್ಷಾ ಸಮಿತಿಯ ಶಿಕ್ಷಕಿ ಪುಷ್ಪಲತಾ ಸ್ವಾಗತಿಸಿ ವಂದಿಸಿದರು ಹಾಗೂ ಕಮಿಟಿಯ ಸದಸ್ಯರು ಕಾರ್ಯಕ್ರಮದ ಆಯೋಜನೆಯಲ್ಲಿ ಸಹಕರಿಸಿದರು.

Related posts

ಪಡ್ಲಾಡಿ 35ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ರಚನೆ

Suddi Udaya

ನಿಡ್ಲೆ: ನೆಡಿಲು ನಾರಾಯಣ ಗೌಡರವರ ತೋಟಕ್ಕೆ ನುಗ್ಗಿದ್ದ ಒಂಟಿ ಸಲಗ: ಹಲವು ಬಾಳೆ ಗಿಡ ಹಾಗೂ ಅಡಿಕೆ ಗಿಡಗಳಿಗೆ ಹಾನಿ

Suddi Udaya

ಹೆದ್ದಾರಿ ಅವಾಂತರ ಕೈಗಾರಿಕಾ ವಸಾಹತಿನ ಉದ್ಯಮಿಗಳ ಪ್ರತಿಭಟನೆ: ತಾ.ಪಂಕಾರ್ಯನಿರ್ವಹಣಾಧಿಕಾರಿ ಭೇಟಿ

Suddi Udaya

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ “ಪರೋಪಕಾರ ಸಪ್ತಾಹ”

Suddi Udaya

ದಿಡುಪೆ -ಎಳನೀರು ರಸ್ತೆ ಅಭಿವೃದ್ಧಿ ಬೆಳ್ತಂಗಡಿ- ಮೂಡಿಗೆರೆ ಶಾಸಕರುಗಳಿಂದ ಪರಿಶೀಲನೆ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವನ್ಯಜೀವಿ ವಿಭಾಗದ ಅಧಿಕಾರಿಗಳ ಉಪಸ್ಥಿತಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಯಕ್ಷಗಾನ ತರಬೇತಿ ತರಗತಿಗೆ ಚಾಲನೆ

Suddi Udaya
error: Content is protected !!