ಅಳದಂಗಡಿ: ಕರ್ನಾಟಕ ಸರಕಾರದ ಉಚಿತ ಗ್ಯಾರಂಟಿ ಯೋಜನೆಗಳ ನೊಂದಾವಣೆಗೆ ಅಳದಂಗಡಿ ಮತ್ತು ಸುಲ್ಕೇರಿ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಅರ್ಹ ಫಲಾನುಭವಿ ಸಾರ್ವಜನಿಕ ಬಂಧುಗಳಿಗೆ ಉಚಿತ ಸೇವೆ ನೀಡಲು ಪಕ್ಷದ ವರಿಷ್ಠರ ಅನುಮತಿ ಮೇರೆಗೆ ಕಾಂಗ್ರೆಸ್ ಪಕ್ಷದ ಕಾರ್ಯಾಲಯ ಹಾಗೂ ಸೇವಾ ಸಿಂಧು ಕೇಂದ್ರದ ಉದ್ಘಾಟನಾ ಸಮಾರಂಭವು ಜು.9ರಂದು ಪದ್ಮಾಂಬ ಕಾಂಪ್ಲೆಕ್ಸ್, ಅಳದಂಗಡಿಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕ ವಸಂತ ಬಂಗೇರ ನೆರವೇರಿಸಿದರು.
ಸಭಾಧ್ಯಕ್ಷತೆಯನ್ನು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಪದ್ಮಾಂಬ ಕಾಂಪ್ಲೆಕ್ಸ್‌ನ ಮಾಲಕ ಪಾಶ್ವನಾಥ ಜೈನ್, ನಾಗಕುಮಾರ್ ಜೈನ್, ಅಳದಂಗಡಿ ಗ್ರಾ.ಪಂ. ಸದಸ್ಯ ಪ್ರಶಾಂತ್ ವೇಗಸ್ ಹಾಗೂ ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶೇಖರ ಕುಕ್ಕೇಡಿ, ವಿಶ್ವನಾಥ ಡೋಂಗ್ರೆ, ಚಂದ್ರ ಮೋಹನ ಜೈನ್, ವಿಶ್ವನಾಥ ಪೂಜಾರಿ ಕುದ್ಯಾಡಿ, ಜಯಾನಂದ ಪೂಜಾರಿ, ಕೊರಗಪ್ಪ ಪೂಜಾರಿ ಸುಲ್ಕೇರಿ, ಗ್ರಾ.ಪಂ ಹಾಲಿ ಮಾಜಿ ಸದಸ್ಯರುಗಳು, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ವಿನೂಷಾ ಪ್ರಕಾಶ್, ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಚಿದಾನಂದ ಪೂಜಾರಿ ಎಲ್ದಡ್ಕ, ಸುನೀಲ್ ಜೈನ್ ಶಿರ್ಲಾಲು ಹಾಗೂ ಇತರರು ಭಾಗವಹಿಸಿದ್ದರು.
ಕು.ಪಂಚಮಿ ಮಯ್ಯ ಪ್ರಾರ್ಥಿಸಿ, ಸಂಜೀವ ಪೂಜಾರಿ ಕೊಡಂಗೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳ್ನಾಡಿದರು, ಎನ್.ವೀರೇಂದ್ರ ಕುಮಾರ್ ಜೈನ್ ನಿರೂಪಿಸಿ, ಸುಭಾಶ್ಚಂದ್ರ ರೈ ಧನ್ಯವಾದವಿತ್ತರು.