25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ ಶ್ರೀ ಗಣೇಶೋತ್ಸವ ಪೂರ್ವಭಾವಿ ಸಭೆ, ವಿವಿಧ ಸಮಿತಿಗಳ‌ ರಚನೆ

ಬಳಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ-ನಾಲ್ಕೂರು-ತೆಂಕಕಾರಂದೂರು
ಇದರ ವತಿಯಿಂದ ವರ್ಷಂಪ್ರತಿ ನಡೆಯುವ 36 ನೇ ವರ್ಷದ ಗಣೇಶೋತ್ಸವ ಸಮಿತಿಯ ಪೂರ್ವತಯಾರಿ ಸಭೆಯು ಬಳಂಜ ಶಾಲೆಯ ಶಾರದಾ ಕಲಾ ಮಂದಿರದಲ್ಲಿ ಜು. 9 ರಂದು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಹೆಗ್ಡೆ ವಹಿಸಿ ಅತ್ಯಂತ ಅಚ್ಚುಕಟ್ಟಾಗಿ ಈ ಬಾರಿಯ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು ಎಲ್ಲರ ಸಹಕಾರ ಕೋರಿದರು.

35ನೇ ವರ್ಷದ ಯಶಸ್ವಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ತಿಳಿಯಪಡಿಸಿದರು.

ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಕಾಪಿನಡ್ಕ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಪ್ರಧಾನ‌ ಕಾರ್ಯದರ್ಶಿ ಯಶೋಧರ ಶೆಟ್ಟಿ, ಕೋಶಾಧಿಕಾರಿ ಗಣೇಶ್ ದೇವಾಡಿಗ ಸಂಭ್ರಮ, ಪ್ರಮುಖರಾದ ವಿಶ್ವನಾಥ ಹೊಳ್ಳ ಮಜ್ಜೇನಿಬೈಲು, ಬಳಂಜ ಗ್ರಾ.ಪಂ ಅಧ್ಯಕ್ಷ ಹೇಮಂತ್ ಕಟ್ಟೆ, ಶಿವಾಜಿ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಜಗದೀಶ್ ರೈ ಹಾನಿಂಜ, ಗಣೇಶ್ ಪೂಜಾರಿ ಬೊಂಟ್ರೋಟ್ಟು, ರಂಜಿತ್ ಹೆಚ್.ಡಿ ಸುಧಾಮ, ಯೋಗೀಶ್ ಆರ್ ಯೈಕುರಿ,ಸತೀಶ್ ಬರಮೇಲು, ಸದಾನಂದ ಪೂಜಾರಿ ಬೊಂಟ್ರೋಟ್ಟು, ಗುರುಪ್ರಸಾದ್ ಹೆಗ್ಡೆ ದರಿಮಾರ್, ರಜತ್ ಹೆಗ್ಡೆ ಬಳಂಜ, ಪ್ರವೀಣ್ ಪೂಜಾರಿ ಲಾಂತ್ಯಾರು, ಕರುಣಾಕರ ಹೆಗ್ಡೆ ಬೊಕ್ಕಸ, ಪ್ರವೀಣ್ ಕೋಟ್ಯಾನ್ ನಿಟ್ಟಡ್ಕ, ಶರತ್ ಅಂಚನ್ ಬಾಕ್ಯರಡ್ಡ, ಚಂದ್ರಹಾಸ ಬಳಂಜ,ರಂಜಿತ್ ಪೂಜಾರಿ ಮಜಲಡ್ಡ,ಗಣೇಶ್ ಪೂಜಾರಿ, ಸಂತೋಷ್ ಜೈನ್,ನಿತ್ಯಾನಂದ ಹೆಗ್ಡೆ, ಡೀಕಯ್ಯ ಕುಲಾಲ್, ಸಂತೋಷ್ ಭಂಡಾರಿ, ಅನಿಲ್ ಬೊಂಟ್ರೋಟ್ಟು, ಪ್ರವೀಣ್ ಕಟ್ಟೆ, ಅಖಿಲ್ ಬೊಂಟ್ರೊಟ್ಟು, ಪ್ರಕಾಶ್ ಅಟ್ಲಾಜೆ ಮೊದಲಾದವರು ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ ಶಾಲೆಯಲ್ಲಿ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ

Suddi Udaya

ಧರ್ಮಸ್ಥಳ: ಕಾರನ್ನು ಅಡ್ಡಗಟ್ಟಿ ಚಾಲಕ ಹಾಗೂ ಕಾರಿನಲ್ಲಿದ್ದ ಮಹಿಳೆಯರ ಮೇಲೆ ಹಲ್ಲೆ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ: ಅಧ್ಯಕ್ಷರಾಗಿ ಜಯರಾಜ ಜೈನ್, ಖಜಾಂಚಿಯಾಗಿ ನಾರಾಯಣ ಶೆಟ್ಟಿ, ರಾಜ್ಯ ಪರಿಷತ್‌ ಸದಸ್ಯರಾಗಿ ಪ್ರದೀಪ್ ಕುಮಾರ್ ಆಯ್ಕೆ

Suddi Udaya

ಮರೋಡಿ-ಪೆರಾಡಿ ಗ್ರಾಮಗಳಲ್ಲಿ ಮಹಾಮಳೆಗೆ ಅನಾಹುತ, ಅಗತ್ಯ ಕ್ರಮ ಕೈಗೊಂಡ ಪಂಚಾಯತ್ ಆಡಳಿತ

Suddi Udaya

ಕಕ್ಕಿಂಜೆ ಶಾಲೆಯಲ್ಲಿ ಮಕ್ಕಳ ಮೇಲೆ ಹೆಜ್ಜೇನು ದಾಳಿ: ಆಸ್ಪತ್ರೆಗೆ ದಾಖಲು

Suddi Udaya

ಬಂದಾರು ಸರಕಾರಿ ಶಾಲೆಯಲ್ಲಿ ಪೋಷಕರಿಂದ ಶ್ರಮದಾನ

Suddi Udaya
error: Content is protected !!