April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಳದಂಗಡಿ: ಸತತ ಪರಿಶ್ರಮವಿದ್ದರೆ ಅಸಾಧ್ಯವಾದ್ದದ್ದು ಯಾವುದು ಇಲ್ಲ: ಸಿ. ಎ. ನಿರೀಕ್ಷಾ ಎನ್

ಅಳದಂಗಡಿ: ತಂದೆ ತಾಯಿ ಮತ್ತು ಗುರು ಹಿರಿಯರ ಆಶೀರ್ವಾದದ ಒಟ್ಟಿಗೆ ಕಠಿಣ ಪರಿಶ್ರಮ ಪಟ್ಟರೆ ಯಾವುದನ್ನೂ ಸಾಧಿಸಬಹುದು ಎಂದು ಸಿಎ ಉತ್ತೀರ್ಣರಾದ ನಿರೀಕ್ಷಾ ಎನ್ ಅಭಿಪ್ರಾಯ ಪಟ್ಟರು.

ಅವರು ಜು. 9 ರಂದು ಅಳದಂಗಡಿ ನಮನ ಸಭಾಭವನದಲ್ಲಿ ನಡೆದ ಸಂತೋಷ ಕೂಟ ಮತ್ತು ಅಭಿನಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿರೀಕ್ಷಾರವರ ಮಾತ ಪಿತರಾದ ಶ್ರೀಮತಿ ಪುಷ್ಪಾವತಿ ಎನ್ ನಾವರ ಮತ್ತು ನಿತ್ಯಾನಂದ ನಾವರರವರು ಆಗಮಿಸಿ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು.

ಮಾವನವರಾದ ಚಿತ್ತರಂಜನ್, ಅಜ್ಜ ಸದಾನಂದ ಪೂಜಾರಿ, ಅಜ್ಜಿ ವಿಮಲ ಸದಾನಂದ ರವರು ಶುಭ ಹಾರೈಸಿ ನೆನಪಿನ ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು.

ಸಿಎ ಉತ್ತೀರ್ಣರಾದ ಖುಷಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಸಲುವಾಗಿ ನೀರೀಕ್ಷಾಳ ಅಜ್ಜಿ ಮನೆಯವರು ಕಾರ್ಯಕ್ರಮವನ್ನುಆಯೋಜಿಸಿದ್ದು ಸೇರಿದ ಬಂಧುಗಳು ತುಂಬಿದ ಮನಸ್ಸಿನಿಂದ ಶುಭ ಹಾರೈಸಿದರು

ಕಾರ್ಯಕ್ರಮವನ್ನು ಅಶೋಕ್ ನಾವೂರುರವರು ನಿರೂಪಿಸಿದರು. ಚಿತ್ತರಂಜನ್ ಧನ್ಯವಾದ ಸಮರ್ಪಿಸಿದರು .

Related posts

ಗುರುವಾಯನಕೆರೆ: ಕೆರೆಯನ್ನು ಅಭಿವೃದ್ಧಿ ಪಡಿಸಲು ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

Suddi Udaya

ಸಿಡಿಲು ಮಳೆ: ಶಿಶಿಲ ರವಿ ರವರ ಮನೆಗೆ ಅಪಾರ ಹಾನಿ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ: ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿ ಅನ್ವಿತ್ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಮುಂಡಾಜೆ: ತುಂಡಾಗಿ ಬಿದ್ದ ಎಚ್‌ ಟಿ ವಿದ್ಯುತ್ ತಂತಿ: ತಪ್ಪಿದ ಭಾರಿ ಅನಾಹುತ

Suddi Udaya

ಉದ್ಯಮಿ ಒಕ್ಕಲಿಗ ಸಂಸ್ಥೆ ಮಂಗಳೂರಿನಲ್ಲಿ ಶುಭಾರಂಭ

Suddi Udaya

ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಹಾಸಭೆ: ವಾರ್ಷಿಕ 150 ಕೋಟಿ ವ್ಯವಹಾರ ಮಾಡಿ 69 ಲಕ್ಷ ನಿವ್ವಳ ಲಾಭ ಗಳಿಸಿದ್ದೇವೆ: ನವೀನ್ ಕೆ ಸಾಮಾನಿ

Suddi Udaya
error: Content is protected !!