ಬೆಳ್ತಂಗಡಿ: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಐವರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು ನಗದು ರೂ. 6680 ವಶಪಡೆಸಿಕೊಂಡಿದ್ದಾರೆ. ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಎಲೆಗಳನ್ನು ಉಪಯೋಗಿಸಿ ಹಣವನ್ನು ಪಣವಾಗಿಟ್ಟು ಜುಗಾರಿ ಆಟ ಆಡುತ್ತಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸರಿಗೆ ದೊರೆತ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ ಐದು ಮಂದಿ ಹಣವನ್ನು ಪಣವಾಗಿಟ್ಟು ಉಲಾಯಿ-ಪಿದಾಯಿ ಎಂಬ ಆಟವನ್ನು ಆಡುವುದು ಕಂಡು ಬಂತು. ಕೂಡಲೇ ಸುತ್ತುವರಿದು ಆಟವಾಡುತ್ತಿದ್ದ ಕೆ. ಶೇಖರ, .ಎಸ್. ಮುಸ್ತಾಫ, ಶ್ರೀನಾಥ, . ಕೆ. ರಮೇಶ, . ಎಂ.ಎ. ಅಬ್ದುಲ್ ಲತೀಫ್ , ಎಂಬವರನ್ನು ಹಿಡಿದು ಒಟ್ಟು ರೂ.6680 ವಶಪಡೆಸಿಕೊಂಡಿದ್ದಾರೆ. ಅವರು ಆಟ ಆಡುತ್ತಿದ್ದ ಸ್ಥಳವನ್ನು ಪರಿಶೀಲಿಸಲಾಗಿ ನೆಲದಲ್ಲಿ ಒಂದು ತಿಳಿ ಹಳದಿ ಬಣ್ಣದ ಒಂದು ಪಾಲಿಥಿನ್ ಪ್ಲಾಸ್ಟಿಕನ್ನು ಬಿಡಿಸಿ ಹಾಕಿದ್ದು ಅದರ ಮೇಲೆ ವಿವಿಧ ಮಾದರಿಯ ಒಟ್ಟು 52 ಇಸ್ಪೀಟ್ ಎಲೆಗಳು ಇದ್ದು ನೆಲದಲ್ಲಿ ಹಾಸಿದ ಪಾಲಿಥಿನ್ ಪ್ಲಾಸ್ಟಿಕ್ ನ ಮೇಲೆ ಒಟ್ಟು ರೂ.2920 ಇದ್ದವು. ಅವುಗಳನ್ನು ವಶಕ್ಕೆ ಪಡೆದುಕೊಂಡು ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 93/2023 ಕಲಂ:87 ಕೆ.ಪಿ ಆ್ಯಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.