30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ವೇಣೂರು: ವಿ.ಕೆ. ಟ್ರೇಡರ್‍ಸ್ ನೂತನ ಕಾಡುತ್ಪತ್ತಿ ವ್ಯಾಪಾರ ಮಳಿಗೆ ಉದ್ಘಾಟನೆ

ವೇಣೂರು: ಇಲ್ಲಿಯ ನೂತನ ಬಸ್ ತಂಗುದಾಣದ ವಾಣಿಜ್ಯ ಸಂಕೀರ್ಣದಲ್ಲಿ ವಿ.ಕೆ. ಟ್ರೇಡರ್‍ಸ್ ಎಂಬ ನೂತನ ಕಾಡುತ್ಪತ್ತಿ ವ್ಯಾಪಾರ ಮಳಿಗೆಯು ಜು.13 ರಂದು ಉದ್ಘಾಟನೆಗೊಂಡಿತು.

ವೇಣೂರು ವರ್ತಕರ ಸಂಘದ ಅಧ್ಯಕ್ಷ ಕೆ. ಭಾಸ್ಕರ ಪೈ ವಿ.ಕೆ. ಟ್ರೇಡರ್‍ಸ್ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷರಾದ ಸುಂದರ ಹೆಗ್ಡೆ ಬಿ.ಇ., ಕರಿಮಣೇಲು ಹಾಲು ಉ.ಸ. ಸಂಘದ ಅಧ್ಯಕ್ಷರಾದ ಪಿ. ದೇಜಪ್ಪ ಶೆಟ್ಟಿ, ಪಿ. ರಮೇಶ್ ಪೂಜಾರಿ ಪಡ್ಡಾಯಿಮಜಲು, ಶಾಂತಿನಗರ ಮದರಸ ಅಧ್ಯಕ್ಷರಾದ ಪಿ.ಎಚ್. ಅಶ್ರಫ್ ಶಾಂತಿನಗರ, ಅಶ್ರಫ್ ಕಾಪಿನಡ್ಕ, ಆಶಿಫ್ ಪಿಲ್ಯ, ವೇಣೂರಿನ ಉದ್ಯಮಿಗಳು, ವ್ಯಾಪಾರಸ್ಥರು, ಹಿತೈಷಿಗಳು ಆಗಮಿಸಿ ಶುಭ ಕೋರಿದರು.

ಸಂಸ್ಥೆಯ ಮಾಲಕರಾದ ಬಶೀರ್ ರವರು ಆಗಮಿಸಿದ ಅತಿಥಿಗಳು ಹಾಗೂ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು. ವೇಣೂರು ಸಿಎ ಬ್ಯಾಂಕ್ ನಿವೃತ್ತ ಮೆನೇಜರ್ ಎಚ್. ಮಹಮ್ಮದ್ ವೇಣೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related posts

ತಾಲೂಕು ಮಟ್ಟದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ: ವಾಣಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಇಳಂತಿಲ : ಸಂವಿಧಾನ ಜಾಗೃತಿ ಜಾಥಾ

Suddi Udaya

ಜ.8: ಉಜಿರೆ, ಧರ್ಮಸ್ಥಳ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಡಿ.19: ಗುರುವಾಯನಕೆರೆ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಬೆಳ್ತಂಗಡಿ ಶ್ರೀ ಧ. ಆಂ.ಮಾ. ಶಾಲೆಗೆ ರಾಷ್ಟ್ರೀಯ ಸಂಸ್ಥೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ನಿರ್ದೇಶಕ ಡಾ. ಕೆ. ಶರ್ಮ ಭೇಟಿ

Suddi Udaya

ಪಂಜಿಕಲ್ಲು ಕಜೆಬೈಲು ಶ್ರೀ ಪಿಲಿಚಾಮುಂಡಿ ದೈವದ ನೇಮದ ಪ್ರಯುಕ್ತ: ಮಧ್ಯಯಕ್ಷಕೂಟದ ವತಿಯಿಂದ ತಾಳಮದ್ದಳೆ

Suddi Udaya
error: Content is protected !!