September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಕರಾಯ ಕಲ್ಲೇರಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟ : ಉಪ್ಪಿನಂಗಡಿ ಪೊಲೀಸರ ದಾಳಿ‌ ನಗದು ಸಹಿತ ಐವರು ವಶಕ್ಕೆ

ಬೆಳ್ತಂಗಡಿ: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಐವರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು ನಗದು ರೂ. 6680 ವಶಪಡೆಸಿಕೊಂಡಿದ್ದಾರೆ. ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಎಲೆಗಳನ್ನು ಉಪಯೋಗಿಸಿ ಹಣವನ್ನು ಪಣವಾಗಿಟ್ಟು ಜುಗಾರಿ ಆಟ ಆಡುತ್ತಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸರಿಗೆ ದೊರೆತ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ‌ ಐದು ಮಂದಿ ಹಣವನ್ನು ಪಣವಾಗಿಟ್ಟು ಉಲಾಯಿ-ಪಿದಾಯಿ ಎಂಬ ಆಟವನ್ನು ಆಡುವುದು ಕಂಡು ಬಂತು. ಕೂಡಲೇ ಸುತ್ತುವರಿದು ಆಟವಾಡುತ್ತಿದ್ದ ಕೆ. ಶೇಖರ, .ಎಸ್. ಮುಸ್ತಾಫ, ಶ್ರೀನಾಥ, . ಕೆ. ರಮೇಶ, . ಎಂ.ಎ. ಅಬ್ದುಲ್ ಲತೀಫ್ , ಎಂಬವರನ್ನು ಹಿಡಿದು ಒಟ್ಟು ರೂ.6680 ವಶಪಡೆಸಿಕೊಂಡಿದ್ದಾರೆ. ‌ಅವರು ಆಟ ಆಡುತ್ತಿದ್ದ ಸ್ಥಳವನ್ನು ಪರಿಶೀಲಿಸಲಾಗಿ ನೆಲದಲ್ಲಿ ಒಂದು ತಿಳಿ ಹಳದಿ ಬಣ್ಣದ ಒಂದು ಪಾಲಿಥಿನ್ ಪ್ಲಾಸ್ಟಿಕನ್ನು ಬಿಡಿಸಿ ಹಾಕಿದ್ದು ಅದರ ಮೇಲೆ ವಿವಿಧ ಮಾದರಿಯ ಒಟ್ಟು 52 ಇಸ್ಪೀಟ್ ಎಲೆಗಳು ಇದ್ದು ನೆಲದಲ್ಲಿ ಹಾಸಿದ ಪಾಲಿಥಿನ್ ಪ್ಲಾಸ್ಟಿಕ್ ನ ಮೇಲೆ ಒಟ್ಟು ರೂ.2920 ಇದ್ದವು. ಅವುಗಳನ್ನು ವಶಕ್ಕೆ ಪಡೆದುಕೊಂಡು ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 93/2023 ಕಲಂ:87 ಕೆ.ಪಿ ಆ್ಯಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ನ.4: ಭಜಕ ಸಹೋದರಿಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

Suddi Udaya

ಕಡಿರುದ್ಯಾವರ ನಿವಾಸಿ ಅನಿಲ್‌ ಪೂಜಾರಿಯವರ 3 ತಿಂಗಳ ಪುಟ್ಟ ಕಂದನ ಶಸ್ತ್ರಚಿಕಿತ್ಸೆಗೆ ನೆರವಾಗಿ

Suddi Udaya

ಕಂಪನಿ ಸೆಕ್ರೆಟರಿ ಪ್ರವೇಶ ಪರೀಕ್ಷೆಯಲ್ಲಿ ಉಜಿರೆ ಶ್ರೀ ಧ.ಮಂ. ಪ.ಪೂ ಕಾಲೇಜಿನ ಏಳು ವಿದ್ಯಾರ್ಥಿಗಳು ತೇರ್ಗಡೆ

Suddi Udaya

ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಪ್ರೌಢಶಾಲೆಯ ದಾಖಲೆಯ ಫಲಿತಾಂಶ

Suddi Udaya

ತಲೆ ಮರೆಸಿಕೊಂಡಿದ್ದ ಆರೋಪಿ ನೆಲ್ಯಾಡಿ ಯಲ್ಲಿ ಬಂಧನ

Suddi Udaya

ನಡ ಸ.ಪ.ಪೂ. ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಚಂದ್ರಶೇಖರ್ ರವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ

Suddi Udaya
error: Content is protected !!