April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚೋಳಮಂಡಲಮ್ ಇನ್ವೆಸ್ಟ್ ಮೆಂಟ್ ಮತ್ತು ಫೈನಾನ್ಸ್ ಕಂಪನಿ‌ ಬೆಳ್ತಂಗಡಿಯಲ್ಲಿ ಕಾರ್ಯಾರಂಭ

ಬೆಳ್ತಂಗಡಿ: ಚೋಳಮಂಡಲಮ್ ಇನ್ವೆಸ್ಟ್ ಮೆಂಟ್ ಮತ್ತು ಫೈನಾನ್ಸ್ ಕಂಪನಿ‌ಯ ನೂತನ ಶಾಖೆ ಶ್ರೀರಾಮ ಕಾಂಪ್ಲೆಕ್ಸ್ ಬೆಳ್ತಂಗಡಿಯಲ್ಲಿ ಶುಭಾರಂಭಗೊಂಡಿದೆ.

ನೂತ‌ನ ಸಂಸ್ಥೆಯ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ ದೀಪ ಬೆಳಗಿಸುವುದರ ಮೂಲಕ‌ ನೇರವೇರಿಸಿ ಬೆಳ್ತಂಗಡಿ ಬೆಳೆಯುತ್ತಿರುವ ನಗರ ಪ್ರದೇಶವಾದ್ದರಿಂದ ಅತ್ಯಂತ ಮೌಲ್ಯಯುತವಾದ ಸಂಸ್ಥೆಯು ಇಲ್ಲಿಗೆ ಬರುತ್ತಿದೆ. ಯಾವುದೇ ಒಂದು ಸಂಸ್ಥೆ ಬೆಳೆಯಬೇಕಾದರೆ ಸಂಸ್ಥೆಯು ಗ್ರಾಹಕರಿಗೆ ಉತ್ತಮ‌ ಸೇವೆ ನೀಡಬೇಕು. ಆ ಮುಖೇನಾ ಸಂಸ್ಥೆ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಿದೆ ಎನ್ನುತ್ತಾ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ ಇದರ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್, ಬೆಳ್ತಂಗಡಿ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲಕ ಪ್ರಮೋದ್ ಆರ್ ನಾಯಕ್, ಶ್ರೀರಾಮ ಕಾಂಪ್ಲೆಕ್ಸ್ ಮಾಲಕ ಮುಖೇಶ್ ನಾಯಕ್, ಇಕೋಫ್ರೆಶ್ ಎಂಟರ್ಪ್ರೈಸಸ್ ಮಾಲಕ ರಾಕೇಶ್ ಹೆಗ್ಡೆ ಬಳಂಜ, ಭಾರತ್ ಆಟೋ ಕಾರ್ಸ್ ಮ್ಯಾನೇಜರ್ ಪ್ರದೀಪ್ ಶೆಟ್ಟಿ, ಪವರ್ ಆನ್ ಬ್ಯಾಟರಿ ಮಾಲಕ ಶೀತಲ್ ಜೈನ್, ಬೆಳ್ತಂಗಡಿ ಎಸ್.ಕೆ ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ.ಆಪರೇಟಿವ್ ಸೊಸೈಟಿ ಮ್ಯಾನೇಜರ್ ಪ್ರಶಾಂತ್ ಹೆಚ್ ಆಚಾರ್ಯ, ರಾಮ್ ಪ್ರಸಾದ್ ಎನ್.ಎಸ್, ಚೋಳಮಂಡಲಮ್ ಇನ್ವೆಸ್ಟ್ ಮೆಂಟ್ ಮತ್ತು ಫೈನಾನ್ಸ್ ಕಂಪನಿ‌ಯ ಅಧಿಕಾರಿಗಳಾದ ರಂಗನಾಥ ಸ್ವಾಮಿ,ಶರಣ್ ಕೆ,ಬಾಲು ಆರ್, ಸೋಹನ್ ಶೆಟ್ಟಿ, ಯೋಗೀಶ್ ಅಮಿನ್, ಅರುಣ್ ಕುಮಾರ್, ಬೆಳ್ತಂಗಡಿ ಬ್ರಾಂಚ್ ಮ್ಯಾನೇಜರ್ ಸುದೀಶ್, ಉಜಿರೆ ಅತಿಯಾಸ್ ಕಂಪೆನಿಯ ಗಣೇಶ್ ಬಂಗೇರ,ಗೋಲ್ಡ್ ಸ್ಮಿತ್ ಬ್ಯಾಂಕಿನ ಮ್ಯಾನೇಜರ್, ಕರ್ನಾಟಕ ಏಜೆನ್ಸಿ, ಕಾಂಚನಾ ಆಟೋಮೋಟಿವ್, ಪಿ.ಎಸ್.ಎನ್ ಮೋಟಾರ್ಸ್ ಮತ್ತು ಸಿಬ್ಬಂದಿಗಳು ಹಾಗೂ ಇತರರು ಆಗಮಿಸಿ ಶುಭಹಾರೈಸಿದರು.

ಆಗಮಿಸಿದ ಅಥಿತಿ ಗಣ್ಯರನ್ನು ಸಂಸ್ಥೆಯ ಸಿಬ್ಬಂದಿ ಅಶ್ವಿನ್ ಸ್ವಾಗತಿಸಿದರು.

Related posts

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ಜೋಯಲ್ ಮೆಂಡೋನ್ಸ ಆಯ್ಕೆ

Suddi Udaya

ಉಜಿರೆ: ಕುಂಜರ್ಪ ನಿವಾಸಿ ತಿಮ್ಮಪ್ಪ ಪೂಜಾರಿ ನಿಧನ

Suddi Udaya

ಕಳಿಯ ಪ್ರಾ.ಕೃ.ಪ.ಸ. ಸಂಘದ ಹಿರಿಯ ಮಾಜಿ ನಿರ್ದೇಶಕರಿಗೆ ಸನ್ಮಾನ

Suddi Udaya

ಅಲಂಕೃತಗೊಂಡ ನಾರಾವಿ ಸಖಿ ಮತದಾನ ಕೇಂದ್ರದಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ

Suddi Udaya

ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನಲ್ಲಿ ಆಟಿದ ಆಯನ ವಿಶೇಷ ಕಾರ್ಯಕ್ರಮ

Suddi Udaya

ಉಜಿರೆ: ಮೊಬೈಲ್ ಕಳೆದುಹೋಗಿದೆ: ಸಿಕ್ಕಿದ್ದಲ್ಲಿ ಹಿಂತಿರುಗಿಸುವಂತೆ ಮನವಿ

Suddi Udaya
error: Content is protected !!