24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಹಳ್ಳಿಂಗೇರಿ ಹಾ.ಉ. ಮಹಿಳಾ ಸಹಕಾರ ಸಂಘದ ಕಟ್ಟಡ ರಚನಾ ಸಮಿತಿ ರಚನೆ

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸದಸ್ಯರ ಸಭೆಯು ಸಂಘದ ಅಧ್ಯಕ್ಷರಾದ ಶ್ವೇತಾ.ಹೆಚ್.ಕೆ. ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಸಂಘದ ನೂತನ ಕಟ್ಟಡವನ್ನು ರಚಿಸಲು ಸಮಿತಿಯನ್ನು ರಚಿಸಲಾಯಿತು.

ಸಮಿತಿಯ ಗೌರವಾಧ್ಯಕ್ಷರಾಗಿ ಕೆ.ವಿ.ಭಟ್‌ ಹಳ್ಳಿಂಗೇರಿ ಇವರನ್ನು ಆರಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ರಾಮಣ್ಣ ಗೌಡ ಕೇಚೋಡಿ, ಉಪಾಧ್ಯಕ್ಷರಾಗಿ ಜಯಂತ ಗೌಡ ಅಡೀಲು ಮತ್ತು ಕಾರ್ಯದರ್ಶಿಯಾಗಿ ಹರಿಪ್ರಸಾದ್ ಕೆ ಇವರನ್ನು ಆಯ್ಕೆಮಾಡಲಾಯಿತು.

ಸಭೆಯಲ್ಲಿ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು, ಕೊಕ್ಕಡ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪವಿತ್ರಾ ಗುರುಪ್ರಸಾದ್, ಪಂಚಾಯತ್ ಸದಸ್ಯರುಗಳಾದ ಪುರುಷೋತ್ತಮ, ಪ್ರಭಾಕರ ಗೌಡ, ಶ್ರೀಮತಿ ವನಿತಾ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ದ.ಕ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ವಿಸ್ತರಣಾಧಿಕರಿಯವರಾದ ರಾಜೇಶ್ ಕಾಮತ್ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು .ಸಂಘದ ಕಾರ್ಯದರ್ಶಿ ಶ್ರೀಮತಿ ಸಂಧ್ಯಾ ಸ್ವಾಗತಿಸಿದರು. ಶ್ರೀಮತಿ ಸುಂದರಿ ವಂದಿಸಿದರು.

Related posts

ತಾಲೂಕು ಮಟ್ಟದ ಮಾದರಿ ತಯಾರಿ ಸ್ಪರ್ಧೆ: ಬೆಳ್ತಂಗಡಿ ಎಸ್. ಡಿ. ಎಂ. ಆಂ.ಮಾ. ಶಾಲೆಯ ವಿದ್ಯಾರ್ಥಿ ಪ್ರತೀಕ್ ವಿ. ಶೆಟ್ಟಿ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ ತಾ.ಪಂ. ಗೃಹರಕ್ಷಕ ದಳದ ಕಛೇರಿಯಲ್ಲಿ ಆಯುಧಪೂಜೆ ಹಾಗೂ ಬೀಳ್ಕೊಡುಗೆ ಸಮಾರಂಭ

Suddi Udaya

ಪಡಿತರ ಚೀಟಿದಾರರು ಇ-ಕೆವೈಸಿ ಮಾಡಲು ಆ.31 ಕೊನೆಯ ದಿನಾಂಕ

Suddi Udaya

ಇಂದು(ಜ.6): ಸೌತಡ್ಕ ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಸಮುದ್ರ ಮಥನ ಸೇವೆಯಾಟ : ಶ್ರೀ ಮಹಾಗಣಪತಿ ದೇವರಿಗೆ “ಮೂಡಪ್ಪ ಸೇವೆ”

Suddi Udaya

ಬೆಳ್ತಂಗಡಿ ಭಾರತಿಯ ಜೈನ್ ಮಿಲನ್ ವಲಯ 8ರ ವಾರ್ಷಿಕ ಮಹಾಸಭೆ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ

Suddi Udaya
error: Content is protected !!