30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಮಂಜುಶ್ರೀ ಭಜನಾ ಮಂಡಳಿ ಕುಂಡದಬೆಟ್ಟು ನೂತನ ಅಧ್ಯಕ್ಷರಾಗಿ ಕೆ ವೈ ರವಿಕುಮಾರ್, ಕಾರ್ಯದರ್ಶಿಯಾಗಿ ತನಿಯಪ್ಪ ರಾಣ್ಯ ಆಯ್ಕೆ

ಕುಕ್ಕೇಡಿ : ಮಂಜುಶ್ರೀ ಭಜನಾ ಮಂಡಳಿ ಕುಂಡದಬೆಟ್ಟು  ಕುಕ್ಕೇಡಿ ನಿಟ್ಟಡೆ ಇದರ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಜಗನ್ನಾಥ ದೇವಾಡಿಗ ರವರ ಅಧ್ಯಕ್ಷತೆಯಲ್ಲಿ ಮಂಜುಶ್ರೀ ಭಜನಾ ಮಂದಿರದಲ್ಲಿ ಜು.16ರಂದು ಜರುಗಿತು.
2023-24 ಹಾಗೂ 2024-25  ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ರವಿಕುಮಾರ್ ಕೆ ವೈ,, ಗೌರವಾಧ್ಯಕ್ಷರಾಗಿ ಅನಿಲ್ ಹೆಗ್ಡೆ ಕೇದಗೆವನ, ಉಪಾಧ್ಯಕ್ಷರಾಗಿ ಹರೀಶ್ ಆಚಾರ್ಯ, ಕಾರ್ಯದರ್ಶಿಯಾಗಿ ತನಿಯಪ್ಪ ರಾಣ್ಯ, ಕೋಶಾಧಿಕಾರಿಯಾಗಿ ಜಯಪ್ರಸಾದ್ ಕುಲಾಲ್, ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ಕುಲಾಲ್ ಪದಾಧಿಕಾರಿಗಳಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗೋಪಾಲ ದೇವಾಡಿಗ, ನಿರಂಜನ ಸಾಲಿಯಾನ್, ಶ್ರೀಮತಿ ಲಕ್ಷ್ಮಿ, ವರದರಾಜ ಕುಲಾಲ್, ಧರ್ನಪ್ಪ ಪೂಜಾರಿ, ಸತೀಶ್ ಕೇರಿಯರ್, ಸತೀಶ್ ಪೂಜಾರಿ, ತಿಮ್ಮಪ್ಪ ಪೊಸಲಾಯಿ, ಧನಂಜಯ ಕುಲಾಲ್, ಸಂಜೀವ ಪೂಜಾರಿ ಆಯ್ಕೆಯಾಗಿರುತ್ತಾರೆ.


ಕಾರ್ಯದರ್ಶಿ ಪದ್ಮನಾಭ ಬೀಯದಡಿ 2022-23 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಆನಂದ ಎನ್ 2022-23 ನೇ ಸಾಲಿನ ಲೆಕ್ಕಪತ್ರ ಆಡಿಟ್ ವರದಿ ಮಂಡಿಸಿದರು.

ಅಧ್ಯಕ್ಷರಾದ ಜಗನ್ನಾಥ ದೇವಾಡಿಗ ಮಾತನಾಡಿ ಕಳೆದ ಎರಡು ವರ್ಷಗಳಿಂದ ಮಂಜುಶ್ರೀ ಭಜನಾ ಮಂದಿರದಲ್ಲಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಸಿಕ್ಕಿರುವುದು ಶ್ರೀ ದೇವರ ದಯೆ, ನಿಸ್ವಾರ್ಥದಿಂದ ಸೇವೆ ಮಾಡಲು ಸಹಕರಿಸಿದ ಎಲ್ಲಾ ಪದಾಧಿಕಾರಿಗಳಿಗೆ, ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರಿಗೆ, ಕುಕ್ಕೇಡಿ ನಿಟ್ಟಡೆಯ ಗ್ರಾಮಸ್ಥರಿಗೆ ಅಭಿನಂದನೆ ತಿಳಿಸಿದರು.

ಗೌರವಾಧ್ಯಕ್ಷರಾದ ಕೆ ವೈ ಈಶ್ವರ ಭಟ್ ರವರು ಶುಭ ಹಾರೈಸಿದರು.
ಮಾ. ನಿತೇಶ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷರಾದ ಭರತ್ ರಾಜ್ ಅಮೈ ಸ್ವಾಗತಿಸಿ ನಿರೂಪಿಸಿದರು. ಸಂತೋಷ್ ಕುಲಾಲ್ ವಂದಿಸಿದರು.

Related posts

ಕಣಿಯೂರು ಗ್ರಾ.ಪಂ. ಅಧ್ಯಕ್ಷರಾಗಿ ಸೀತಾರಾಮ ಆಯ್ಕೆ

Suddi Udaya

ಬಳಂಜ:ಎಲ್ಯೊಟ್ಟು ನಲ್ಲಿ ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲ ರಚನೆ

Suddi Udaya

ಕಲ್ಮಂಜ: ಸಿದ್ದಬೈಲು ಪರಾರಿ ಸ.ಹಿ.ಪ್ರಾ. ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಕುತ್ಲೂರು ಸರಕಾರಿ ಶಾಲೆಯ ಕೈತೋಟದಲ್ಲಿ ಬೆಳೆದ ತರಕಾರಿ ಹಸ್ತಾಂತರ

Suddi Udaya

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ ನಡೆಸುವಂತೆ: ರೆಖ್ಯ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗ್ರಾಮ ಸಮಿತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ

Suddi Udaya
error: Content is protected !!