38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ : ಪಿ. ಡೀಕಯ್ಯ ಚಳುವಳಿಯ ಹೆಜ್ಜೆ ಗುರುತುಗಳು-ಒಂದು ಸ್ಮರಣೆ’ ಕಾರ್ಯಕ್ರಮ

ಬೆಳ್ತಂಗಡಿ : ಸಮಾನ ಮನಸ್ಕರ ಆಯೋಜನೆಯೊಂದಿಗೆ ನಾಡಿನ ಹಿರಿಯ ಅಂಬೇಡ್ಕರ್ ವಾದಿ , ಬಹುಜನ ಚಳುವಳಿಯ ಮುಖಂಡ ಪಿ.ಡೀಕಯ್ಯರವರ ಚಳುವಳಿಯ ಹೆಜ್ಜೆ ಗುರುತುಗಳ ಅವಲೋಕನ”
ಒಂದು ಸ್ಮರಣೆ ಕಾರ್ಯಕ್ರಮವು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜು16 ರಂದು ನಡೆಯಿತು.
ಬಹುಜನ ಚಳುವಳಿಯ ಹಿರಿಯ ಮುಖಂಡ ಅಣ್ಣು ಸಾಧನ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಉಪನ್ಯಾಸಕ ರಘು ಧರ್ಮಸೇನ್ , ಮಾಜಿ ಜಿ.ಪಂ. ಸದಸ್ಯೆ ಸಿ.ಕೆ.ಚಂದ್ರಕಲಾ,
ರಾಜೀವ ಕಕ್ಕೆಪದವು ಮುಂತಾದವರು ಮಾತನಾಡಿ ಪಿ.ಡೀಕಯ್ಯರವರ ಚಳುವಳಿಯ ಮಹತ್ವದ ಘಟನೆಗಳನ್ನು ಮೆಲುಕು ಹಾಕಿದರು.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸಕಿ ಡಾ.ಆಶಾಲತಾ ಪಿ., ಹಿರಿಯ ಮುಖಂಡರಾದ ಹೆಚ್.ಬಿ.ಮೋಹನ್, ಪದ್ಮನಾಭ ಅವರು ಡೀಕಯ್ಯರವರ ಚಳುವಳಿಯ ಹೆಜ್ಜೆ ಗುರುತುಗಳನ್ನು ನೆನಪಿಸಿಕೊಂಡು ಅವರ ಸೈದ್ಧಾಂತಿಕ ಆದರ್ಶಗಳನ್ನು ಅನುಸರಿಸಿದರೆ ಗೌರವ ಸಲ್ಲಿಸಿದಂತೆ ಎಂದು ಅಭಿಪ್ರಾಯಪಟ್ಟರು.

ಬಿ.ವಿ.ಎಫ್. ತಾಲೂಕು ಸಂಯೋಜಕ ಪ್ರಶಾಂತ್ , ನೀಲೇಶ್ ಪೆರಿಂಜೆ, ಮತ್ತಿತರರು ಉಪಸ್ಥಿತರಿದ್ದರು.
ಪಿ.ಡೀಕಯ್ಯರವರ ನೇತೃತ್ವದ ಬಹುಜನ ಚಳುವಳಿಯಲ್ಲಿ ಗುರುತಿಸಿಕೊಂಡ ಹಿರಿಯ, ಕಿರಿಯ ಒಡನಾಡಿಗಳು ಪಾಲ್ಗೊಂಡು ನೆನಪುಗಳನ್ನು ಹಂಚಿಕೊಂಡರು.

ಚಳುವಳಿಯ ಮುಖಂಡ ಶಿವಪ್ಪ ಗರ್ಡಾಡಿ ಕಾರ್ಯಕ್ರಮ ನಿರೂಪಿಸಿದರು. ಬಹುಜನ ಚಳುವಳಿಯ ಮುಖಂಡ ಶ್ರೀನಿವಾಸ್ ಪಿ.ಎಸ್. ವಂದಿಸಿದರು.

Related posts

ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾಗಿ ಯು.ಕೆ ಮುಹಮ್ಮದ್ ಹನೀಫ್ ನೇಮಕ

Suddi Udaya

ಸವಿ ಇಲೆಕ್ಟ್ರಾನಿಕ್ಸ್ ಹೌಸ್ ಆಫ್ ಫರ್ನಿಚರ್ಸ್ & ಹೋಮ್ ಅಪ್ಲಾಯನ್ಸ್, ಸವಿ ಫೂಟ್ ವೇರ್ ಹಾಗೂ ಪ್ರಗತಿ ಎಲೆಕ್ಟ್ರಿಕಲ್ & ರೆಫ್ರಿಜರೇಷನ್ ಸೇಲ್ಸ್ & ಸರ್ವಿಸ್ ಮಳಿಗೆ ಶುಭಾರಂಭ

Suddi Udaya

ಬೆಳಾಲು: ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಹಸಿರುವಾಣಿ ಹೊರಕಾಣಿಕೆಗೆ ಚಾಲನೆ

Suddi Udaya

ಬಂದಾರು: ಕೋಡಿಮಜಲು ನಿವಾಸಿ ಕುಕ್ಕಪ್ಪ ಗೌಡ ನಿಧನ

Suddi Udaya

ಬೆಳ್ತಂಗಡಿ ಸಂಜಯ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಮಳೆಲ್ ಓರ್ ನಾಲ್ ಕ್ರೀಡಾಕೂಟ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya
error: Content is protected !!