September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ ಕಪಿಲಾ ಜೇಸಿಗೆ ವಲಯ ಉಪಾಧ್ಯಕ್ಷರ ಭೇಟಿ

ಕೊಕ್ಕಡ: ಕೊಕ್ಕಡ ಕಪಿಲಾ ಜೇಸಿಗೆ ವಲಯ 15 ಪ್ರಾಂತ್ಯ ಸಿ. ಇದರ ಉಪಾಧ್ಯಕ್ಷರ ಅಧಿಕೃತ
ಭೇಟಿ ಕಾರ್ಯಕ್ರಮ ಜುಲೈ 16 ರಂದು ನಡೆಯಿತು.

ವಲಯ ಉಪಾಧ್ಯಕ್ಷರಾದ ಭರತ್ ಶೆಟ್ಟಿ ಅವರು ಎಲ್. ಎ. ವಿ. ಎಂಬ ತರಬೇತಿ ನೀಡಿದರು.

ಕೊಕ್ಕಡ ಕಪಿಲಾ ಜೇಸಿ ಘಟಕಾಧ್ಯಕ್ಷರಾದ ಜಿತೇಶ್ ಎಲ್ ಪಿರೇರಾ ಅಧ್ಯಕ್ಷತೆ ವಹಿಸಿದ್ದರು.

ಮಹಿಳಾ ಜೇಸಿ ವಿಭಾಗ ಮುಖ್ಯಸ್ಥರಾದ ದೀಪಾ ವಿ. ಜೇಸಿ ವಾಣಿ ವಾಚಿಸಿದರು. ಕೋಶಾಧಿಕಾರಿ ಜಸ್ವಂತ್ ಪಿರೇರಾ ಅವರು ಅತಿಥಿಗಳ ಪರಿಚಯ ಮಾಡಿದರು.

ಇದೇ ವರ್ಷ ಜೆ.ಎಫ್.ಎಂ. ಪುರಸ್ಕಾರ ಗಳಿಸಿದ ಕೆ. ಶ್ರೀಧರ್ ರಾವ್ ಹಾಗೂ ಹೆಚ್. ಜಿ.ಎಫ್. ಫೆಲೋಶಿಪ್ ಪಡೆದ ಜೆಸಿಂತಾ ಡಿ ಸೋಜ ಅವರಿಗೆ ಪಿನ್ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಜೋಯ್ ಬೊತೇಲೊ ಹಾಗೂ ಪ್ರಕಾಶ್ ಬೊತೇಲೊ ಅವರನ್ನು ಜೇಸಿಯ ಪ್ರಮಾಣ ವಚನ ನೀಡಿ ಜೇಸಿ ಅಧಿಕಾರಿಗಳು ಸ್ವಾಗತಿಸಿದರು.

ಜಸ್ವಂತ್, ಶ್ರೀಧರ್ ರಾವ್ ಹಾಗೂ ಜೋಯಿ ಅವರು ತರಬೇತಿ ಕುರಿತು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಜೋಸೆಫ್ ಪಿರೇರಾ ಅವರು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಕಾರ್ಯದರ್ಶಿ ವಿಕ್ಟರ್ ಸುವಾರಿಸ್ ವಂದಿಸಿದರು.

Related posts

ಬೆಳ್ತಂಗಡಿ ವಕೀಲರ ಸಂಘದಿಂದ ಸಂವಿಧಾನ ದಿನಾಚರಣೆಯ ಪ್ರಯುಕ್ತ ರಸಪ್ರಶ್ನೆ ಕಾರ್ಯಕ್ರಮ

Suddi Udaya

ಬೆಳಾಲು ಶ್ರೀ ಧ. ಮ. ಅನುದಾನಿತ ಪ್ರೌಢಶಾಲೆಯಲ್ಲಿ ಆಟಿದ ಲೇಸ್ ಕಾರ್ಯಕ್ರಮ

Suddi Udaya

ವೇಣೂರು ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ವೇಣೂರು ಅರಣ್ಯ ಇಲಾಖೆಯಿಂದ ಬೋನು ಅಳವಡಿಕೆ

Suddi Udaya

ಗುರುವಾನಯನಕೆರೆ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಒಕ್ಕೂಟದಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಪದಗ್ರಹಣ

Suddi Udaya

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಜಿರೆ ಘಟಕದಿಂದ ಸಾರಿಗೆ ಇಲಾಖೆಯ ನಿರ್ಲಕ್ಷತೆಯಿ೦ದ ನಡೆದ ಬಸ್‌ ಅಪಘಾತ ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ಸಿನ ಸಮಸ್ಯೆಯ ವಿರುದ್ಧ ರಸ್ತೆ ತಡೆ ಮಾಡಿ ಪ್ರತಿಭಟನೆ

Suddi Udaya

ಶ್ರೀ ರಾಮ ಕ್ಷೇತ್ರಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭಜನಾ ತಂಡದೊಂದಿಗೆ ಭೇಟಿ

Suddi Udaya
error: Content is protected !!