29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಲವಂತಿಗೆ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

ಮಲವಂತಿಗೆ : ಮಲವಂತಿಗೆ ಗ್ರಾಮ ಪಂಚಾಯತಿನ 2023-24 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಜು.19 ರಂದು ಮಲವಂತಿಗೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು.

ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ತಾರಾಕೇಶ್ವರಿ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.

ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷತೆ ಅನಿತಾ ಕೆ ವಹಿಸಿದ್ದರು.

ಪಂಚಾಯತು ಅಭಿವೃದ್ಧಿ ಅಧಿಕಾರಿ ರಶ್ಮಿ ಬಿ.ಪಿ ಸ್ವಾಗತ, ವರದಿ ಲೆಕ್ಕಪತ್ರ ಮಂಡಿಸಿದರು.

ಪ್ರಾರಂಭದಲ್ಲಿ ಮಲವಂತಿಗೆ ಗ್ರಾಮದ ಮಂಟಮೆ ಬಾಲಕೃಷ್ಣರವರು 8ನೇ ತರಗತಿ ವಿದ್ಯಾರ್ಥಿ ಮನೆಯಲ್ಲಿ ಆಟವಾಡುತ್ತಿದ್ದ ಸಂದರ್ಭ ಉಯ್ಯಾಲೆಯ ಹಗ್ಗ ಕುತ್ತಿಗೆ ಸಿಲುಕಿ ಸಾವನ್ನಪ್ಪಿದ ಶ್ರೀಶ ಇವರ ಆತ್ಮಶಾಂತಿಗಾಗಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಮೆಸ್ಕಾಂ, ಕಂದಾಯ, ಮಹಿಳಾ ಮತ್ತು ಕಲ್ಯಾಣ ಇಲಾಖೆ, ಕೃಷಿ, ಆರೋಗ್ಯ, ಅರಣ್ಯ ಇಲಾಖೆ, ಪ್ರಾದೇಶಿಕ ಅರಣ್ಯ ಇಲಾಖೆ ಇವರು ತಮ್ಮ ತಮ್ಮ ಇಲಾಖಾ ಮಾಹಿತಿ ನೀಡಿದರು.

ಚರ್ಚಿತ ವಿಷಯಗಳು: ರಸ್ತೆ ದುರಸ್ತಿ, ದಾರಿದೀಪ ನಿರ್ವಹಣೆ, ಕಾಡು ಪ್ರಾಣಿಗಳಿಂದ ಬೆಳೆನಾಶ, ನವಿಲು, ಕೋತಿಗಳ ಉಪಟಲ, ಆರೋಗ್ಯ ಕೇಂದ್ರ, ಅಂಗನವಾಡಿ, ಪ್ರವಾಸಿಗರಿಂದ ಪರಿಸರ ಮಾಲಿನ್ಯ ವಿಷಯಗಳು ಪ್ರತಿಧ್ವನಿಸಿದವು.

ಉಪಾಧ್ಯಕ್ಷ ದಿನೇಶ್ ಗೌಡ, ಪಂಚಾಯತು ಸದಸ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಇಂದು (ಜ.10): ಮುಂಡಾಜೆ ಶ್ರೀ ಪರಶುರಾಮ ದೇವಸ್ಥಾನದಲ್ಲಿ ಸಾಮೂಹಿಕ ಆರತಿ ಕಾರ್ಯಕ್ರಮ

Suddi Udaya

ಬೆಳಾಲು ಶ್ರೀ ಧ.ಮಂ.ಅ. ಪ್ರೌಢ ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ ಬೆಳ್ತಂಗಡಿ ತಾಲೂಕಿನ ವಿವಿಧ ಇಲಾಖೆಯ ಒವರಂ ಕ್ರಿಕೆಟ್ ಪಂದ್ಯಾಟ “ರಾಜಕೇಸರಿ ರತ್ನ ಟ್ರೋಫಿ”

Suddi Udaya

ಆ 21: ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಸಿ.ಆರ್ ರಿಕೇಶ್ ಶರ್ಮಾ ಬೆಳ್ತಂಗಡಿಗೆ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಛಂದಸ್ಸು: ಪರಿಚಯಾತ್ಮಕ ಕಾರ್ಯಗಾರ

Suddi Udaya

ಪೆರಿಂಜೆ : ಭಗವಾನ್ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ಮಂಗಲಪ್ರವಚನ

Suddi Udaya
error: Content is protected !!