27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಕಳೆಂಜ: ಮಳೆ ನೀರಿನಿಂದ ಹರಡುವ ರೋಗಗಳ ಬಗ್ಗೆ ಮಾಹಿತಿ

ಕಳೆಂಜ: ದಕ್ಷಿಣ ಕನ್ನಡ ರೂರಲ್ ಡೆವಲಪ್ಮೆಂಟ್ ಸೊಸೈಟಿ (ರಿ) ಬೆಳ್ತಂಗಡಿ (ಡಿ.ಕೆ.ಆರ್.ಡಿ.ಎಸ್) ಮಹಿಳಾ ಸಬಲೀಕರಣ ಯೋಜನೆಯ ಅಂಗವಾಗಿ ಕಳೆಂಜದ ಸರ್ವಶ್ರೀ ಮಹಾ ಸಂಘದ ಸದಸ್ಯರಿಗೆ ಮಳೆ ನೀರಿನಿಂದ ಹರಡುವ ವಿವಿಧ ಖಾಯಿಲೆಗಳ ಬಗ್ಗೆ ಮಾಹಿತಿ ಕಾರ್ಯಗಾರವು ಜು. 18 ರಂದು ಕಾಯರ್ತಡ್ಕ ಸೈಂಟ್ ಸೆಬಾಸ್ಟಿಯನ್ ಚರ್ಚ್ ಸಭಾಭವನದಲ್ಲಿ ನಡೆಯಿತು.

ಕಾಯರ್ತಡ್ಕ ವಲಯದ ಆಶಾ ಕಾರ್ಯಕರ್ತೆಯಾದ ಶ್ರೀಮತಿ ದೇವಕಿರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಡೆಂಗ್ಯೂ ಜ್ವರ, ಮಲೇರಿಯಾ, ಇಲಿ ಜ್ವರ, ಚಿಕುನ್ ಗುನ್ಯಾ ಮುಂತಾದ ರೋಗಗಳ ಬಗ್ಗೆ ಮಾಹಿತಿ ನೀಡಿದರು. ಸರ್ವಶ್ರೀ ಮಹಾ ಸಂಘದ ಸದಸ್ಯರಾದ ಶ್ರೀಮತಿ ತ್ರೇಸಿಯಾರವರು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಸೌಭಾಗ್ಯ ಸಂಘದ ಸದಸ್ಯೆ ಶ್ರೀಮತಿ ಸಿಲ್ವಿ ಎ.ಟಿ ಸ್ವಾಗತಿಸಿ, ಸ್ನೇಹ ಸಂಘದ ಸದಸ್ಯೆ ಶ್ರೀಮತಿ ಶಾಲಿರವರು ಧನ್ಯವಾದವಿತ್ತರು. ಕಾರ್ಯಕರ್ತರಾದ ಮಾರ್ಕ್ ಡಿ ಸೋಜಾರವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಒಟ್ಟು 25 ಮಂದಿ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಸಂತ ಲಾರೆನ್ಸ್ ಚರ್ಚ್‌ನಲ್ಲಿ ಆತ್ಯಾಕರ್ಷವಾಗಿ ಗಮನ ಸೆಳೆದ ಗೋದಲಿ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನೇತೃತ್ವದಲ್ಲಿ ವನಮಹೋತ್ಸವ

Suddi Udaya

ಮುಂಡಾಜೆ ಗ್ರಾ. ಪಂ. ಮಾಜಿ ಸದಸ್ಯ, ಪ್ರಗತಿಪರ ಕೃಷಿಕ, ಯಕ್ಷಗಾನ, ತಾಳಮದ್ದಳೆ ಹವ್ಯಾಸಿ ಕಲಾವಿದ ವಾಮದೇವ ಆಠವಳೆ ನಿಧನ

Suddi Udaya

ತಣ್ಣೀರುಪಂತ: ನವಚೇತನಾ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನೂತನ ಕಟ್ಟಡದ ಉದ್ಘಾಟನೆ

Suddi Udaya

ವೇಣೂರು ತಾಲೂಕು ಕೇಂದ್ರದಿಂದ ವಿವಿಧ ಉಪವಸತಿಗಳಿಗೆ ರಾಮಮಂತ್ರಾಕ್ಷತೆಯ ಕಲಶಗಳ ಹಸ್ತಾಂತರ

Suddi Udaya

ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಎಲ್ ಸಿ ಆರ್ ಬಿ.ಕಾಂ ವಿಭಾಗಕ್ಕೆ ಪ್ರಶಸ್ತಿ

Suddi Udaya
error: Content is protected !!