2023 -24 ನೇ ಸಾಲಿನ ಮರುವಿನ್ಯಾಸ ಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ ಹಾಗೂ ಕಾಳುಮೆಣಸು, ಬೆಳೆಗಳಿಗೆ ಬೆಳೆ ವಿಮೆ ಪಾವತಿಸಲು ದಕ್ಷಿಣ ಕನ್ನಡ ರೈತರಿಗೆ ಜು.31 ಪ್ರೀಮಿಯಂ ಪಾವತಿಸಲು ಅಂತಿಮ ದಿನವಾಗಿದೆ. ಈ ಕುರಿತ ಆದೇಶವನ್ನು ರಾಜ್ಯ ಸರಕಾರ ಜು.19 ರಂದು ಹೊರಡಿಸಿದೆ.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಕಾರ್ಯ ರೂಪಕ್ಕೆ ಬಂದು 5 ವರ್ಷಗಳು ಸಂದಿದ್ದು, ಇಷ್ಟೂ ವರ್ಷಗಳಲ್ಲಿ ಜೂನ್ ತಿಂಗಳ ಆರಂಭದ ದಿನದಿಂದ ಜೂನ್ ತಿಂಗಳ ಅಂತ್ಯದವರೆಗೆ ಪ್ರೀಮಿಯಂ ಪಾವತಿಗೆ ಕಲ್ಪಿಸಿ ಸರಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ ಈ ಬಾರಿ ಜುಲೈ ತಿಂಗಳ ಮಧ್ಯ ಭಾಗದವರೆಗೆ ಸರಕಾರ ಯಾವುದೇ ಅಧಿಸೂಚನೆ ಹೊರಡಿಸಿರಲಿಲ್ಲ . ಆದರೆ ಜೂನ್ ತಿಂಗಳಿನಲ್ಲಿ ಭತ್ತದ ಬೆಳೆ ಫಸಲ್ ಭಿಮಾ ಯೋಜನೆಯಡಿ ವಿಮಾ ಕಂತು ಪಾವತಿಸಲು ಸರಕಾರ ಆದೇಶ ಹೊರಡಿಸಿತ್ತು. ಇದರಿಂದ ಸಹಜವಾಗಿಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಟ ಪ್ರಮಾಣದಲ್ಲಿರುವ ಅಡಿಕೆ ಬೆಳೆಗಾರರು ಆತಂಕಗೊಂಡಿದ್ದರು.
ನಿನ್ನೆ ಸರಕಾರ ದಕ್ಷಿಣ ಕನ್ನಡ ಜಿಲ್ಲೆ ಸಂಬಂಧಿಸಿದಂತೆ ಅಡಿಕೆ ಮತ್ತು ಕಾಳು ಮೆಣಸನ್ನು ಬೆಳೆ ವಿಮೆ ಯೋಜನೆಯಡಿ ಸೇರಿಸಿ ಆದೇಶಿಸಿದೆ.
ಅಡಿಕೆಗೆ ಗರಿಷ್ಟ ವಿಮಾ ಮೊತ್ತ ಹೆಕ್ಟರಿಗೆ 128000 ಎಂದು ನಿಗದಿ ಪಡಿಸಲಾಗಿದ್ದು ಇದರಲ್ಲಿ ರೈತ ಪಾವತಿಸಬೇಕಾದ ಮೊತ್ತ ರೂ 6400 ಇನ್ನೂ ಕಾಳು ಮೆಣಸಿಗೆ ಹೆಕ್ಟರ್ ವೊಂದಕ್ಕೆ ಗರಿಷ್ಟ ಪ್ರೀಮಿಯಂ ಮೊತ್ತ 47000 ರೂಪಾಯಿ ಎಂದು ನಿಗದಿಪಡಿಸಲಾಗಿದ್ದು, ಅದರಲ್ಲಿ ರೈತ ಪಾವತಿಸಬೇಕಾದ ಮೊತ್ತ ರೂ 2350 ಆಗಿರುತ್ತದೆ.